More

    ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ

    ದಾವಣಗೆರೆ : ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
     ನಗರದ ಪುಷ್ಪಾ ಶಾಮನೂರು ಮಹಾಲಿಂಗಪ್ಪ ವಿಜ್ಞಾನ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ, ‘ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣಗಳು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
     ಭಾರತ ವಿಶ್ವಗುರುವಿನ ಸ್ಥಾನದಲ್ಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚು ಮಹತ್ವವಿದೆ. ಶುಕ್ರವಾರ ಉಡಾವಣೆಗೊಂಡ ‘ಚಂದ್ರಯಾನ-3’ ಬಾಹ್ಯಾಕಾಶ ನೌಕೆಯ ಯಶಸ್ಸು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಯಶಸ್ಸಿನ ಹಿಂದೆ ಕನ್ನಡದ ವಿಜ್ಞಾನಗಳ ಪಾತ್ರವೂ ಇದೆ ಎಂದು ಹೇಳಿದರು.
     ಹರಿಹರದ ಹಿರಿಯ ಕವಿ ಹುಲಿಕಟ್ಟೆ ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಕನ್ನಡದ ಇತಿಹಾಸವನ್ನು ತಿಳಿದುಕೊಂಡು ಹೊಸ ಚರಿತ್ರೆ ನಿರ್ಮಾಣಕ್ಕೆ ಕಾರಣರಾಗಬೇಕು. ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
     ಪ್ರಕಾಶಕ ಹಾಗೂ ಕೃತಿಯ ಲೇಖಕ ಸಿರಿಗೇರಿ ಯರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 30 ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಸಮ್ಮೇಳನಗಳ ಅಧ್ಯಕ್ಷರ ಭಾಷಣವನ್ನು ಕೃತಿ ರೂಪದಲ್ಲಿ ಹೊರ ತರುವ ಉದ್ದೇಶವಿದೆ ಎಂದು ತಿಳಿಸಿದರು.
     ಕಾಲೇಜಿನ ಮುಖ್ಯಸ್ಥೆ ಸಂಜನಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಸಾಹಿತಿ ಬಾ.ಮಾ. ಬಸವರಾಜಯ್ಯ, ನಿವೃತ್ತ ಕಂದಾಯ ಅಧಿಕಾರಿ ಗುರುಮೂರ್ತಿ ಇದ್ದರು. ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಕನ್ನಡ ಅಧ್ಯಾಪಕಿ ಸರ್ವಮಂಗಳಮ್ಮ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts