More

    ಜೀವಗಳ ಉಳಿವಿಗೆ ರಕ್ತದಾನ ಅವಶ್ಯಕ

    ದಾವಣಗೆರೆ : ರಕ್ತದ ಅವಶ್ಯಕತೆ ಪೂರೈಸಲು ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಜಿಲ್ಲಾ ಜನರಲ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ.ಎಚ್. ಗೀತಾ ಹೇಳಿದರು.
     ದಾವಣಗೆರೆ ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗ, ಸ್ನಾತಕೋತ್ತರ ವಿಭಾಗಗಳ ಎನ್ನೆಸ್ಸೆಸ್ ಘಟಕ ಹಾಗೂ ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
     ದಾವಣಗೆರೆ ಸೇರಿ ನೆರೆಯ ಹಾವೇರಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಾರೆ. ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರು, ಥಲಸಿಮಿಯಾ, ಅನಿಮಿಯಾ ಮೊದಲಾದ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವುದು ಅವಶ್ಯಕ ಎಂದು ತಿಳಿಸಿದರು.
     ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಒಂದು ಬಾರಿಯಾದರೂ ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವ ಉಳಿಸಲು ಮುಂದಾಗಬೇಕು. ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರ ಆಯೋಜಿವುದು ಬಹಳ ಮಹತ್ವದ ಕಾರ್ಯವಾಗಿದೆ ಎಂದರು.
     ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಒಂದು ಮಹತ್ತರ ಮಾನವೀಯ ಸೇವೆ. ಜೀವ ಉಳಿಸಿದ ಧನ್ಯತೆ ಹಾಗೂ ಸಂತೃಪ್ತಿ ನೀಡುವ ರಕ್ತದಾನ ಸೇವೆಯ ಅವಕಾಶ ಮತ್ತು ಶ್ರೇಷ್ಠತೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪ್ರತಿವರ್ಷ ರಕ್ತದಾನದಿಂದ ಅಸಂಖ್ಯಾತ ಜೀವ ಉಳಿಸಬಹುದು ಎಂದು ತಿಳಿಸಿದರು.
     ಕುಲಸಚಿವ ಪ್ರೊ.ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ಪ್ರೊ. ಆರ್. ಶಶಿಧರ್, ವಿಜ್ಞಾನ ನಿಕಾಯದ ಡೀನ್ ಪ್ರೊ. ಮಹಾಬಲೇಶ್ವರ, ಸಂಶೋಧನ ಮತ್ತು ಅಭಿವೃದ್ಧಿ ಕೋಶ  ನಿರ್ದೇಶಕ ಪ್ರೊ. ಪ್ರಕಾಶ್, ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಎಂ.ಯು. ಲೋಕೇಶ್, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಪ್ರಕಾಶ ಗಡಿಯಾರ್, ಡಾ. ಸಿದ್ದಪ್ಪ ಕಕ್ಕಳಮೇಲಿ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts