More

    ದಾವಣಗೆರೆ ಜಿಲ್ಲೆಯ ವಿವಿಧೆಡೆ ಪ್ರಧಾನಿ ಸಂವಾದ ವೀಕ್ಷಣೆ

    ದಾವಣಗೆರೆ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರೊಂದಿಗೆ ಗುರುವಾರ ನಡೆಸಿದ ಸಂವಾದದ ನೇರ ಪ್ರಸಾರವನ್ನು ವೀಕ್ಷಿಸಲು ಜಿಲ್ಲೆಯ ವಿವಿಧೆಡೆ ವ್ಯವಸ್ಥೆ ಮಾಡಲಾಗಿತ್ತು.
     ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಎಲ್ಇಡಿ ಪರದೆ ಅಳವಡಿಸಲಾಗಿತ್ತು. ಪ್ರಧಾನಿ ಅವರ ಭಾಷಣವನ್ನು ಕಾರ್ಯಕರ್ತರು ಆಸಕ್ತಿಯಿಂದ ವೀಕ್ಷಿಸಿದರು. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅವರು ನೀಡಿದ ಕಿವಿಮಾತು ಆಲಿಸಿದರು.
     ಸಂವಾದ ವೀಕ್ಷಿಸಿದ ನಂತರ ಸಂಸದ ಜಿ.ಎಂ. ಸಿದ್ದೇಶ್ವರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರೇ ಈ ರೀತಿ ಸಂವಾದ ನಡೆಸುವುದರಿಂದ ಕಾರ್ಯಕರ್ತರಿಗೆ ಪ್ರೇರಣೆ ದೊರೆಯುತ್ತದೆ. ಬೂತ್ ಮಟ್ಟದಲ್ಲಿ ಗೆಲ್ಲಬೇಕು ಎನ್ನುವ ಹುಮ್ಮಸ್ಸು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
     ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ ಹರಿಹರದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ನಂತರ ದಾವಣಗೆರೆಯಲ್ಲಿ ಪ್ರಮುಖರ ಸಭೆ ನಡೆಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ. 29ರಂದು ಮಾಯಕೊಂಡದಲ್ಲಿ ಸಭೆ ನಡೆಸಲಿದ್ದು 30 ರಂದು ಹೊನ್ನಾಳಿಗೆ ಭೇಟಿ ನೀಡುವರು ಎಂದು ತಿಳಿಸಿದರು.
     ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಶಿವಾನಂದ, ಮುಖಂಡರಾದ ಸುಧಾ ಜಯರುದ್ರೇಶ್, ಶ್ರೀನಿವಾಸ ದಾಸಕರಿಯಪ್ಪ, ಜಯಮ್ಮ, ಸುರೇಶ ಗಂಡಗಾಳೆ ಇದ್ದರು. ಸ್ಥಳೀಯ ಕಾರ್ಯಕರ್ತರು ಸಂವಾದದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
     ನಗರದ ಕೆಟಿಜೆ ನಗರ, ನಿಟ್ಟುವಳ್ಳಿ, ರಾಂ ಆ್ಯಂಡ್ ಕೋ ವೃತ್ತದಲ್ಲೂ ವರ್ಚುಯಲ್ ಸಭೆಗಳು ನಡೆದವು. ಅಲ್ಲದೇ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಒಂದು ಕಡೆ (ಮಹಾ ಶಕ್ತಿ ಕೇಂದ್ರ) ವ್ಯವಸ್ಥೆ ಮಾಡಲಾಗಿತ್ತು. ಹರಿಹರ, ಮಲೇಬೆನ್ನೂರು, ದೊಡ್ಡಬಾತಿ ಮುಂತಾದ ಕಡೆ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts