More

    ಇಂದಿನಿಂದ ದತ್ತಮಾಲಾ ಧಾರಣೆ ಅಭಿಯಾನ

    ಮಂಗಳೂರು: ಶ್ರೀರಾಮ ಸೇನೆ ಕರ್ನಾಟಕ ವತಿಯಿಂದ ದತ್ತ ಜಯಂತಿ ಅಂಗವಾಗಿ ದತ್ತಮಾಲಾ ಧಾರಣೆ ಅಭಿಯಾನ ಅ.30ರಿಂದ ನ.5ರವರಗೆ ನಡೆಯಲಿದೆ.

    ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಸುಮಾರು ಎರಡು ಸಾವಿರ ಮಂದಿ ಭಾಗವಹಿಸಲಿದ್ದಾರೆ. ದತ್ತ ಪೀಠ ಹಿಂದು ಪೀಠ ಎಂದು ಘೋಷಣೆಯಾಗಬೇಕು ಇತ್ಯಾದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಈ ಅಭಿಯಾನ ನಡೆಸಲಾಗುತ್ತಿದೆ. ದತ್ತ ಪೀಠಕ್ಕೆ ಒಬ್ಬ ಶಾಶ್ವತ ಹಿಂದು ಕಾರ್ಯನಿರ್ವಹಣಾಧಿಕಾರಿ ನೇಮಿಸುವುದು ಅವಶ್ಯಕ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅ.30ರಂದು ದತ್ತಮಾಲಾ ಧಾರಣೆ, ನ.2ರಂದು ದತ್ತ ದೀಪೋತ್ಸವ, ನ.4ರಂದು ಪಡಿ ಸಂಗ್ರಹ ನಡೆಯಲಿದೆ. ನ.5ರಂದು ಬೆಳಗ್ಗೆ 7ಕ್ಕೆ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ. ಬೆಳಗ್ಗೆ 11ಕ್ಕೆ ದತ್ತ ಪಾದುಕೆ ದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್, ಜಿಲ್ಲಾ ಕಾರ್ಯಾಧ್ಯಕ್ಷ ಅರುಣ್ ಕದ್ರಿ, ಜಿಲ್ಲಾ ವಕ್ತಾರ ಯೋಗೀಶ್ ರಂಗಿಪೇಟೆ, ಸುರತ್ಕಲ್ ಪ್ರಖಂಡ ಅಧ್ಯಕ್ಷ ನವೀನ್ ಕೋಡಿಕಲ್, ನಗರಾಧ್ಯಕ್ಷ ಜಯೇಶ್ ಸಚ್ಚು, ನಗರ ಸಂಘಟನಾ ಕಾರ್ಯದರ್ಶಿ ರಾಜೇಶ್ ಉರ್ವಸ್ಟೋರ್ ಸುದ್ದಿಗೋಷ್ಠಿಯಲ್ಲಿದ್ದರು.

    ದತ್ತ ಪೀಠದಲ್ಲಿ ಅಮೂಲ್ಯ ವಿಗ್ರಹಗಳು, ಕಾಣಿಕೆ ವಸ್ತುಗಳು ಕಾಣೆಯಾಗಿರುವ ಬಗ್ಗೆ ಹಾಗೂ ದತ್ತ ಪೀಠದ ಆಸ್ತಿಯ ಹಸ್ತಾಂತರ ಮತ್ತು ಮಾರಾಟವಾಗಿರುವ ಬಗ್ಗೆ ತನಿಖೆ ಮಾಡಬೇಕು. ಪೀಠಕ್ಕೆ ಬರುವ ಭಕ್ತರಿಗೆ ಹಾಗೂ ಸ್ವಾಮೀಜಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ತಕ್ಷಣ ದತ್ತಪೀಠ ಎಂದು ನಿರ್ಣಯಿಸಿ ಆದೇಶ ಹೊರಡಿಸಬೇಕು.

    ಆನಂದ್ ಶೆಟ್ಟಿ ಅಡ್ಯಾರ್

    ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts