More

    ದಚ್ಚುಗೆ ಶುಭಕೋರಿ ಅಪ್ಪು ಟ್ವೀಟ್​: ದರ್ಶನ್​ ಅಭಿಮಾನಿಯ ರೀಟ್ವೀಟ್​ಗೆ ಜಾಲತಾಣದಲ್ಲಿ ಕಿಡಿ

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಲ್ಲದೆ, ಚಿತ್ರರಂಗದ ಸಹದ್ಯೋಗಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ಸ್ಟಾರ್​ ನಟರೊಬ್ಬರು ಶುಭಾಶಯ ಕೋರಿ ಮಾಡಿರುವ ಟ್ವೀಟ್​ಗೆ ದರ್ಶನ್​ ಅಭಿಮಾನಿಯ ರೀಟ್ವೀಟ್​ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಇಂದು ಬೆಳಗ್ಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಹ್ಯಾಪಿ ಬರ್ತ್​ಡೇ ದರ್ಶನ್​ ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ದರ್ಶನ್​ ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಓರ್ವ ಅಭಿಮಾನಿ ಮಾಡಿರುವ ರೀಟ್ವೀಟ್​ ದಚ್ಚು ಮತ್ತು ಅಪ್ಪು ಅಭಿಮಾನಿಗಳ ನಡುವೆ ಕಿಚ್ಚು ಹಚ್ಚಿದೆ.

    ರೀಟ್ವೀಟ್​ ಮಾಡಿರುವ ಅಭಿಮಾನಿ “ಧನ್ಯವಾದಗಳು ಸರ್​, ನಮ್ಮ ಡಿ ಬಾಸ್ ರೇಂಜ್​ಗೆ ನೀವು ಬೆಳೆಯಬೇಕು” ಎಂದು​ ಟ್ವೀಟ್​ ಮಾಡಿದ್ದಾನೆ. ಇದರಿಂದ ಕುಪಿತಗೊಂಡಿರುವ ಅಪ್ಪು ಅಭಿಮಾನಿಗಳು ಮೊದಲು ಟ್ವೀಟ್​ ಡಿಲೀಟ್​ ಮಾಡು. ಈಗಾಗಲೇ ಅಪ್ಪು ಸರ್​ ಬೆಳೆದಿದ್ದಾರೆ. ಟ್ವೀಟ್​ ಮಾಡುವ ಮುನ್ನ ಹಿಂದೆ ಮುಂದೆ ಯೋಚಿಸು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮುಂದುವರಿದು ಮೊದಲು ನೀನು ಎಲ್ಲರನ್ನು ಬೆಳೆಸುವುದನ್ನು ಕಲಿ, ಆಗ ನಿಮ್ಮ ಹೀರೋ ಕೂಡ ಬೆಳೆಯುತ್ತಾರೆ. ನಮ್ಮ ಪವರ್​ ಸ್ಟಾರ್​ ಏನೆಂದು ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಗೊತ್ತು ಎಂದೆಲ್ಲ ಟೀಕಾ ಪ್ರಹಾರ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts