More

    ಅಫ್ರಿದಿಯಿಂದ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ಎಂದ ಕನೇರಿಯಾ

    ಲಾಹೋರ್: ಪದೆ ಪದೇ ಭಾರತ ವಿರುದ್ಧ ಒಂದಿಲ್ಲೊಂದು ವಿಷಯದಲ್ಲಿ ಟೀಕಾ ಪ್ರಹಾರ ಮಾಡುತ್ತಿರುವ ಮಾಜಿ ನಾಯಕ ಶಾಹಿದ್ ಅಫ್ರಿದಿಯಿಂದ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ಎಂದು ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಆರೋಪಿಸಿದ್ದಾರೆ. ಶಾಹಿದ್ ಅಫ್ರಿದಿ ಅವರ ಬಾಲಿಶ ಹೇಳಿಕೆಗಳಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ. ಶಾಹಿದ್ ಅಫ್ರಿದಿ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಭಾರತ ಕ್ರಿಕೆಟಿಗರಿಂದ ತಿರುಗೇಟು ಅನುಭವಿಸಿದ್ದ ಅಫ್ರಿದಿ, ಇದೀಗ ಸ್ವದೇಶ ಬಾಂಧವನಿಂದಲೇ ಟೀಕೆಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ಕರೊನಾ ಮಣಿಸಲು ಖಾಕಿತೊಟ್ಟ ಫುಟ್‌ಬಾಲ್ ಆಟಗಾರ್ತಿ

    ಮೋದಿ ವಿರುದ್ಧ ಟೀಕೆ ಸಲ್ಲ ಎಂದ ಕನೇರಿಯಾ
    ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕೆಟ್ಟ ಪದಗಳನ್ನು ಉಪಯೋಗಿಸಿ ಟೀಕೆ ಮಾಡುವುದು ಸರಿಯಲ್ಲ. ಮೋದಿ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಟೀಕಿಸಲು ಹೋಗುವುದಿಲ್ಲ. ಇಮ್ರಾನ್ ಖಾನ್ ಅವರನ್ನು ನೋಡಿ ಅಫ್ರಿದಿ ಕೂಡ ಕಲಿತುಕೊಳ್ಳಲಿ ಎಂದು ಪಾಕ್ ಪರ ಆಡಿದ 2ನೇ ಹಿಂದು ಕ್ರಿಕೆಟಿಗ ಎನಿಸಿದ್ದ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಮಾತನಾಡುವುದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ, ಮಾತನಾಡುವುದಕ್ಕೂ ಮೊದಲು ಯೋಚಿಸಿ ಮಾತನಾಡಬೇಕು ಎಂದಿದ್ದಾರೆ. ಇಂಥ ಹೇಳಿಕೆಗಳಿಂದ ಎರಡು ದೇಶಗಳ ನಡುವಿನ ಸಂಬಂಧವೇ ಹಾಳಾಗುತ್ತದೆ. ಎಚ್ಚರಿಕೆಯಿಂದ ಮಾತನಾಡುವುದು ಒಳಿತು ಎಂದು ಕನೇರಿಯಾ ಮಾಜಿ ನಾಯಕನಿಗೆ ಬುದ್ದಿಮಾತು ಹೇಳಿದ್ದಾರೆ. ಇದಕ್ಕೂ ಮೊದಲು ಕನೇರಿಯಾ, ವೃತ್ತಿ ಜೀವನ ಹಾಳಾಗಲು ಅಫ್ರಿದಿಯೇ ಕಾರಣ ಎಂದು ದೂರಿದ್ದರು.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದೆ ಆಡಲ್ವಂತೆ ಈ ಟೆನಿಸ್​ ಆಟಗಾರ್ತಿ!

    ಪಿಒಕೆಯಲ್ಲಿ ನಿಂತು ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಅಫ್ರಿದಿಗೆ ಭಾರತದ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಂಸದ ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ತಿರುಗೇಟು ನೀಡಿದ್ದರು. ಕಾಶ್ಮೀರಕ್ಕಿದ್ದ 370 ವಿಧಿ ರದ್ದುಗೊಳಿಸಿದ್ದಕ್ಕೂ ಅಫ್ರಿದಿ ಭಾರತವನ್ನು ಟೀಕಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts