More

    ಈ ರಾಶಿಯ ನೌಕರರಿಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ: ನಿತ್ಯ ಭವಿಷ್ಯ

    ಮೇಷ: ವ್ಯಾಪಾರ ವಹಿವಾಟುಗಳಲ್ಲಿ ಜಿಗುಟುತನವನ್ನೇ ತೋರಿಸುತ್ತೀರಿ. ಆದರೂ ಮೋಸ ಹೋದೀರಿ. ಸಿಟ್ಟಾಗದೆಯೇ ಶಾಂತವಾಗಿರಿ. ಶುಭಸಂಖ್ಯೆ: 4

    ವೃಷಭ: ಸರ್ಕಾರಿ ಕೆಲಸಗಳಲ್ಲಿ ಅನೇಕ ಅಡೆತಡೆಗಳು ಎದುರಾಗಬಹುದು. ಆತ್ಮವಿಶ್ವಾಸ ಇದ್ದೇ ಇರಲಿ. ಧೈರ್ಯದಿಂದಲೇ ಮುನ್ನುಗ್ಗಿ. ಶುಭಸಂಖ್ಯೆ: 6

    ಮಿಥುನ: ಹೊಸ ಸಮಸ್ಯೆ ಬಂದುಬಿಟ್ಟಿತೆಂಬ ಅಂಜಿಕೆ ಬೇಡ. ಬಾಳಿನಲ್ಲಿ ಬಂದ ಬಿರುಗಾಳಿಯನ್ನು ತಡೆಯಲು ಶಿವನನ್ನು ಸ್ತುತಿಸಿ. ಶುಭಸಂಖ್ಯೆ: 9

    ಕಟಕ: ಆರೋಗ್ಯದ ಕುರಿತು ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ಸಿದ್ಧಿ ಲಭಿಸಲಿದೆ. ನೌಕರರಿಗೆ ಪದೋನ್ನತಿಯೂ ದೊರೆಯುವ ಸಾಧ್ಯತೆಯಿದೆ. ಶುಭಸಂಖ್ಯೆ: 1

    ಸಿಂಹ: ಅಪವಾದಗಳನ್ನು ಎದುರಿಸುವ ಸಂದರ್ಭ ಬರಬಹುದು. ಆದರೆ ಹೃದಯ ಶುದ್ಧವಾಗಿರಲಿ. ಸತ್ಯವನ್ನು ಮಾತ್ರ ಬಿಡದಿರಿ. ಶುಭಸಂಖ್ಯೆ: 8

    ಕನ್ಯಾ: ಅನಗತ್ಯವಾಗಿ ಸಂಚಾರ ಮಾಡಬೇಕಾದೀತು. ಅವಸರ ಮಾಡಬೇಡಿ. ಕೊಂಚ ತಾಳ್ಮೆಯಿಂದ ವರ್ತಿಸಿದರೆ ನಿಮಗೇ ಕ್ಷೇಮವಿದೆ. ಶುಭಸಂಖ್ಯೆ: 5

    ತುಲಾ: ಮನಸ್ಸಿನಲ್ಲಿ ಚಿಂತೆ ತುಂಬುತ್ತಿದೆ. ಕೆಲಸಗಳಲ್ಲಿ ನಿರ್ವಿಘ್ನವನ್ನು ಸಾಧಿಸಲು ಶ್ರೀಗಣೇಶನನ್ನು ಸ್ತುತಿಸಿ. ನೆಮ್ಮದಿ ಲಭ್ಯವಾಗಲಿದೆ. ಶುಭಸಂಖ್ಯೆ: 3

    ವೃಶ್ಚಿಕ: ಹತ್ತಿರದವರಿಂದ ತೊಂದರೆ ಎದುರಾದೀತು. ಕೋಪದ ಕೈಗೆ ಬುದ್ಧಿ ಕೊಡಲು ಹೋಗದಿರಿ. ವಿವೇಚನೆಯು ಇದ್ದೇ ಇರಲಿ. ಶುಭಸಂಖ್ಯೆ: 7

    ಧನುಸ್ಸು: ಯಾವ ಕಾರಣಕ್ಕೂ ಮೈಮರೆಯಬೇಡಿ. ಕಳ್ಳರ ಭಯ ಕಾಡಲಿದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 2

    ಮಕರ: ದಿನದ ಆರಂಭದಲ್ಲಿ ಲಾಭದ ವಿಷಯದಲ್ಲಿ ಅನಿಶ್ಚಿತತೆ ಇದೆಯಾದರೂ ಅಂತ್ಯದ ವೇಳೆಗೆ ಎಲ್ಲವೂ ಸರಿಯಾಗಲಿವೆ. ಶುಭಸಂಖ್ಯೆ: 4

    ಕುಂಭ: ಅನೇಕ ಹೊಸ ಸ್ನೇಹಿತರನ್ನು ಭೇಟಿಯಾಗುವ ಸುಯೋಗವಿದೆ. ಆದರೆ ಹಳೆಯ ಮಿತ್ರರ ಬಗ್ಗೆ ತಾತ್ಸಾರದ ಮನೋಭಾವ ಬೇಡ. ಶುಭಸಂಖ್ಯೆ: 6

    ಮೀನ: ಸ್ಥಿರಾಸ್ಥಿ ಸಂಪಾದನೆಯ ಅವಕಾಶ ಕೂಡಿಬರಲಿದೆ. ಹಿರಿಯರು ಹಾಗೂ ಸಂಗಾತಿಯ ಸಲಹೆಗಳನ್ನು ಪಡೆದುಕೊಂಡೇ ಮುನ್ನಡೆಯಿರಿ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts