More

    ಈ ರಾಶಿಯವರಿಗೆ ಚಿನ್ನ ಖರೀದಿಸಲು ಇಂದು ಒಳ್ಳೆಯ ದಿನ: ನಿತ್ಯ ಭವಿಷ್ಯ

    ಮೇಷ: ಸಹೋದರರನ್ನು ಭೇಟಿಯಾಗಲಿದ್ದೀರಿ. ರಾಜಕಾರಣಿಗಳೊಂದಿಗೆ ಒಡನಾಡುವ ಅವಕಾಶವನ್ನೂ ಪಡೆಯುವಿರಿ. ಶುಭಸಂಖ್ಯೆ: 9

    ವೃಷಭ: ವಾಹನ ಅಪಘಾತದ ಭಯವಿದೆ. ಖಾಸಗಿ ವಾಹನಗಳಲ್ಲಿ ಬಹು ದೂರದ ತನಕ ಒಬ್ಬರೇ ಪ್ರಯಾಣಿಸಬೇಡಿ. ಎಚ್ಚರ. ಶುಭಸಂಖ್ಯೆ: 6

    ಮಿಥುನ: ಉದ್ಯಮಿಗಳಿಗೆ ಅನುಕೂಲದ ವಾತಾವರಣ ಇರಲಿದೆ. ಚಿನ್ನವನ್ನು ಖರೀದಿ ಮಾಡಲು ಕೂಡ ಬಹಳ ಒಳ್ಳೆಯ ದಿನವಾಗಿದೆ. ಶುಭಸಂಖ್ಯೆ: 5

    ಕಟಕ: ಮರಳಿ ಬರಬೇಕಾದಂತಹ ಹಣ ಬರಲಿದೆ. ವಿಶೇಷ ಮನ್ನಣೆಯೂ ಸಿಗಲಿದೆ. ಕಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಿ. ಶುಭಸಂಖ್ಯೆ: 2

    ಸಿಂಹ: ಪೂರ್ವದಿಕ್ಕಿನ ಪ್ರಯಾಣದಿಂದ ಶುಭವಿದೆ. ರಾಜಕಾರಣಿಗಳ ನೆರವು ಲಭ್ಯ. ವಿವೇಕದಿಂದಲೇ ಕಾರ್ಯಪ್ರವೃತ್ತರಾದರೆ ಕ್ಷೇಮ. ಶುಭಸಂಖ್ಯೆ: 1

    ಕನ್ಯಾ: ಮಕ್ಕಳ ಆರೋಗ್ಯದಲ್ಲಿ ಬದಲಾವಣೆ ಆದೀತು. ವೈದ್ಯರ ಬಳಿ ತೋರಿಸುವುದು ಉತ್ತಮ. ಧನ್ವಂತರಿಯನ್ನು ಸ್ಮರಿಸಿ. ಶುಭಸಂಖ್ಯೆ: 7

    ತುಲಾ: ಹಿರಿಯರಿಂದ ಸಂತಸದ ಸಮಾಚಾರವನ್ನು ಕೇಳುವಿರಿ. ವಿದ್ಯುತ್ ಉಪಕರಣಗಳ ಬಗ್ಗೆ ಮಾತ್ರ ಹೆಚ್ಚಿನ ಎಚ್ಚರ ವಹಿಸಿ. ಶುಭಸಂಖ್ಯೆ: 3

    ವೃಶ್ಚಿಕ: ಕೌಟುಂಬಿಕ ವ್ಯವಹಾರದ ಅನೇಕ ಚಿಂತೆಗಳೆಲ್ಲ ದೂರವಾಗಲಿವೆ. ಸರ್ಕಾರಿ ವ್ಯವಹಾರಗಳು ಕೂಡ ಸುಗಮವಾಗಿ ನೆರವೇರಲಿವೆ. ಶುಭಸಂಖ್ಯೆ: 4

    ಧನುಸ್ಸು: ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ಪರಿಹಾರವಾಗಲಿವೆ. ಭೂವ್ಯವಹಾರ ಮಾಡದಿರಿ. ಮನೆಯಲ್ಲೇ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 8

    ಮಕರ: ಕೆಲಸದ ಬಗ್ಗೆ ಮೇಲಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಪ್ರಯಾಣದ ವೇಳೆ ಖರ್ಚಿಗೆ ಮಿತಿ ಹಾಕಿಕೊಂಡರೆ ಉತ್ತಮ. ಶುಭಸಂಖ್ಯೆ: 9

    ಕುಂಭ: ಸಹೋದ್ಯೋಗಿಗಳಿಂದ ಉತ್ತಮವಾದ ಸಹಕಾರ ಲಭ್ಯ. ಗುರು ಹಿರಿಯರ ಸೇವೆ ಮಾಡಿ, ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 6

    ಮೀನ: ಅಚ್ಚರಿಯ ಸಮಾಚಾರ ಕೇಳಬೇಕಾದೀತು. ಹೊಸ ಕೆಲಸಕ್ಕೂ ಮುನ್ನ ದೀರ್ಘವಾಗಿ ಯೋಚಿಸಿಯೇ ನಿರ್ಧರಿಸಿ. ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts