ಮೇಷ: ಮನೆಯಲ್ಲಿ ಒತ್ತಡದ ಅನುಭವ. ವ್ಯಾಪಾರದಲ್ಲಿ ನಷ್ಟವಾದೀತು, ಜಾಗೃತೆ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 3
ವೃಷಭ: ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆಪಡುವಿರಿ. ನಟರಿಗೆ ವಿಶೇಷ ಅವಕಾಶ ದೊರೆಯಲಿದೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:3
ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಕ್ಷಿಸಿದಂತೆ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ. ಶುಭಸಂಖ್ಯೆ: 8
ಕಟಕ: ಗೃಹ ನಿರ್ಮಾಣದ ಕನಸಿನ ಸಾಕಾರ. ಪತ್ನಿಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ: 9
ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕಾರಣಿಗಳಿಗೆ ವಿಶೇಷ ದಿನ. ಕಲಾವಿದರಿಗೆ ಸಂತಸ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 9
ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತೀರ್ಪ. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 6
ತುಲಾ: ಮಾತೃಮೂಲವಾದಂತಹ ಧನಪ್ರಾಪ್ತಿ. ಮನೆ ಕಟ್ಟುವುದಕ್ಕೆ ಚಾಲನೆ ಕೊಡುವಿರಿ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಶುಭಸಂಖ್ಯೆ: 5
ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸುವುದು ಸಲ್ಲದು. ಮನೆಗೆ ಅಪರೂಪದ ಅತಿಥಿಯ ಆಗಮನ. ಸುಖ ಭೋಜನ. ಶುಭಸಂಖ್ಯೆ: 2
ಧನುಸ್ಸು: ಆರ್ಥಿಕ ಅಡಚಣೆ. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 9
ಮಕರ: ಧೃಡ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಸಂಬಂಧಿಕರಿಂದ ಸಲಹೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 6
ಕುಂಭ: ವಿದ್ಯಾರ್ಥಿಗಳಿಗೆ ಕನಸಿನ ಸಾಕಾರ. ಸೋಮಾರಿತನ ನಿಮ್ಮ ಶತ್ರು. ದಿನಾಂತ್ಯದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಶುಭಸಂಖ್ಯೆ: 4
ಮೀನ: ವ್ಯಾಪಾರಸ್ಥರಿಗೆ ಧನಲಾಭ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿ ಮನೆಗೆ ಭೇಟಿ. ಶುಭಸಂಖ್ಯೆ: 5