More

    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ನಿರೀಕ್ಷಿಸಿದ್ದಕ್ಕಿಂತ ಅಧಿಕ ಲಾಭ ಸಿಗಲಿದೆ

    ಮೇಷ: ವೃತ್ತಿಜೀವನದಲ್ಲಿ ಸ್ಪರ್ಧೆ ಏರ್ಪಡಬಹುದು. ಕರ್ತೃತ್ವ ಕ್ಕೆ ಭಾಗ್ಯದ ಸಹಾಯವಾಗಲಿದೆ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 1

    ವೃಷಭ: ನಿರೀಕ್ಷಿಸಿದ್ದಕ್ಕಿಂತ ಅಧಿಕ ಲಾಭ ಸಿಗಲಿದೆ. ಉದ್ಯೋಗದಲ್ಲಿ ಸ್ಪರ್ಧೆಯ ಭೀತಿ. ಭಾಗ್ಯೋದಯ ನಿಮ್ಮದಾಗಲಿದೆ. ಶುಭಸಂಖ್ಯೆ: 2

    ಮಿಥುನ: ಹಿರಿಯರ ಮಾರ್ಗದರ್ಶನ ಅಗತ್ಯ. ಆರೋಗ್ಯದ ವಿಚಾರದಲ್ಲಿ ದೊಡ್ಡ ಖರ್ಚು ಎದುರಾಗಲಿದೆ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 6

    ಕಟಕ: ನಿಮ್ಮ ಪ್ರಗತಿ ಮತ್ತು ಉತ್ಕರ್ಷಕ್ಕೆ ಈ ದಿನ ಸಾಕ್ಷಿಯಾಗಲಿದೆ. ಆರೋಗ್ಯದ ನಿರ್ಲಕ್ಷ ಬೇಡ. ಶ್ರದ್ಧೆಯಿಂದ ಕಾಯಕ ನಿರ್ವಹಿಸಿ. ಶುಭಸಂಖ್ಯೆ: 8

    ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಆರೋಗ್ಯ ತೊಂದರೆ ಕಾಡಬಹುದು, ಎಚ್ಚರದಿಂದಿರಿ. ಅದೃಷ್ಟದಿಂದ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 3

    ಕನ್ಯಾ: ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ಲಾಭದ ಪ್ರಯೋಜನ ತಕ್ಷಣ ಸಿಗುವುದಿಲ್ಲ. ಅಧ್ಯಯನಶೀಲ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 6

    ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

    ವೃಶ್ಚಿಕ: ಪಡೆದ ಶಿಕ್ಷಣ ನೆರವಿಗೆ ಬರಲಿದೆ. ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿ ಯಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 6

    ಧನಸ್ಸು: ಆಸ್ತಿ ಲಾಭ. ಅಣ್ಣ-ತಮ್ಮಂದಿರ ಮೇಲೆ ಪ್ರೇಮ ಮೂಡಲಿದೆ. ನಿರೀಕ್ಷಿಸಿದಷ್ಟು ಲಾಭವಾಗುವುದಿಲ್ಲ. ಅಡಚಣೆಯಿಂದ ವಿಳಂಬ. ಶುಭಸಂಖ್ಯೆ: 9

    ಮಕರ: ಕೆಲಸ ಯಶಸ್ವಿಯಾಗುತ್ತದೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1

    ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಪ್ರಗತಿ ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆಗೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5

    ಮೀನ: ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ.ಸಾರ್ವಜನಿಕ ರಂಗದಲ್ಲಿ ವಿಶೇಷ ಪೋ›ತ್ಸಾಹ. ಸಹೋದರನ ಜತೆ ವಾದ ಬೇಡ. ಶುಭಸಂಖ್ಯೆ: 4

    | ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts