More

    ಸೈಕ್ಲೋನ್​ ಮೈಚಾಂಗ್​ ಎಫೆಕ್ಟ್​; ಚಳಿ ಜೊತೆ ಶುರುವಾದ ಮಳೆ; ಡಿ. 7, 8ಕ್ಕೆ ಕರಾವಳಿ ಭಾಗದಲ್ಲಿ ವರುಣಾರ್ಭಟ..!

    ರಾಜ್ಯದಲ್ಲಿ ಭಾನುವಾರದಿಂದಲೇ ಚಂಡಮಾರುತದ ಪ್ರಭಾವ ಕಂಡು ಬರುತ್ತಿದೆ. ಇಂದು ಹಾಗೂ ಡಿಸೆಂಬರ್ 7 ಮತ್ತು 8ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.


    ಬೆಂಗಳೂರು, ಬೆಂಗಳೂರು ಗ್ರಾಮಾಂರತರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಕೋಲಾರ ಭಾಗದಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.


    ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗಂಟೆಗೆ 100 -130ಕಿಮೀ ವೇಗದಲ್ಲಿ ಮೈಚಾಂಗ್ ಚಂಡಮಾರುತ ಚಲಿಸುತ್ತಿದೆ.


    ಚಂಡಮಾರುತ ಚೆನ್ನೈನಿಂದ ಉತ್ತರ ದಿಕ್ಕಿನಲ್ಲಿ ಚಲಿಸಿ ತೀವ್ರವಾಗಲಿದೆ. ಮಚಲಿಪಟ್ಟಣ ಹಾಗೂ ನೆಲ್ಲೂರು ಮಧ್ಯ ಕರಾವಳಿಯನ್ನು ಹಾದುಹೋಗಲಿದೆ.
    ದಕ್ಷಿಣ ಒಳನಾಡಿನ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ಹಾಗೂ 8, 9 ತಾರೀಕಿನಂದು ಮಳೆ ಆಗಲಿದೆ. ಉತ್ತರ ಒಳನಾಡಿನ ಬೀದರ್, ಕಲಬರಗಿ, ಯಾದಗಿರಿ ಭಾಗದ ಒಂದೆರಡು ಕಡೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


    ಈಗಾಗಲೇ ಹವಾಮಾನ ಇಲಾಖೆ ಮೈಚಾಂಗ್​​ ಚಂಡಮಾರುತದ ವಿರುದ್ಧವಾಗಿ ಅಲರ್ಟ್​​ ಘೋಷಿಸಿದ್ದು, ಈಗಾಗಲೇ ಹವಾಮಾನ ಇಲಾಖೆ ಸಹ ಮುಂದಿನ ಎರಡು ದಿನ ರಾಜ್ಯದಲ್ಲಿ ಹಗುರ ಮಳೆಯಾಗುವ ಮಾಹಿತಿಯನ್ನು ನೀಡಿದೆ. ಭಾನುವಾರ ರಾತ್ರಿಯಿಂದಲೇ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ತುಂತುರು ಮಳೆ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts