More

    ಹಾವೇರಿಯಲ್ಲಿ ಪ್ರಥಮ ಬಾರಿಗೆ ಸೈಕ್ಲೋತ್ಸವ

    ಹಾವೇರಿ: ನಗರದಲ್ಲಿ ಪ್ರಥಮ ಬಾರಿಗೆ ಹಾವೇರಿ ಫಿಟ್​ನೆಸ್ ಟ್ರಸ್ಟ್​ನ ಸೈಕ್ಲಿಂಗ್ ಕ್ಲಬ್​ನಿಂದ ನಗರದಲ್ಲಿ ಭಾನುವಾರ ಸೈಕ್ಲೋತ್ಸವ ನಡೆಯಿತು.

    ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ಜಿಪಂ ಸಿಇಒ ಮಹಮದ್ ರೋಶನ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತಿತರರು ಬಾವುಟ ತೋರಿಸಿ ಸೈಕ್ಲೋತ್ಸವಕ್ಕೆ ಚಾಲನೆ ನೀಡಿದರು.

    ಸೈಕ್ಲಿಂಗ್ ಸ್ಪರ್ಧೆಯು 10 ಕಿ.ಮೀ. ವರೆಗೆ ನಡೆಯಿತು. ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಡಿಸಿ ಕಚೇರಿಯ ರಸ್ತೆಯಲ್ಲಿ ಸಂಚರಿಸಿ ಮರಳಿ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಸ್ಪರ್ಧಾಳುಗಳು ಬಂದರು. ಸ್ಪರ್ಧೆಯಲ್ಲಿ 300ಕ್ಕೂ ಅಧಿಕ ಸೈಕಲ್ ಪಟುಗಳು ಪಾಲ್ಗೊಂಡಿದ್ದರು. ಅಲ್ಲದೆ, ಇದೇ ಸಮಯದಲ್ಲಿ 3 ಕಿ.ಮೀ. ಮ್ಯಾರಥಾನ್ ಸಹ ಆಯೋಜಿಸಲಾಗಿತ್ತು. ಭಾಗವಹಿಸಿದ್ದ ಎಲ್ಲರಿಗೂ ಮೆಡಲ್ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

    ಹಾವೇರಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಎಂಆರ್​ಎಂ ರಾವ್, ಕಾರ್ಯದರ್ಶಿ ಡಾ. ಶ್ರವಣ ಪಂಡಿತ, ಸದಸ್ಯರಾದ ಡಾ. ಗಿರೀಶ ಮಲ್ಲಾಡದ, ಎ. ಧರಣೀಶ, ತಿಮ್ಮೇಶಕುಮಾರ, ಎಂ.ಎಂ. ಹನುಮನಹಳ್ಳಿ ಇತರರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts