More

    ಕೆಲಸ ಕೊಡಿಸ್ತೇವೆ ಅಂದ್ರು, ನಾಲ್ಕಾರು ಉದ್ಯೋಗಾಕಾಂಕ್ಷಿಗಳಿಂದ 3 ಲಕ್ಷ ರೂಪಾಯಿ ಎಗರಿಸಿದ್ರು!

    ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸ ಕೊಡಿಸುವ ನೆಪದಲ್ಲಿ ಸೈಬರ್ ಕಳ್ಳರು ಒಟ್ಟು 3 ಲಕ್ಷ ರೂ. ವಂಚಿಸಿದ್ದಾರೆ. ಕೆಲಸ ಕೊಡಿಸುವುದಾಗಿ ವೈಟ್ ಫೀಲ್ಡ್ ನಿವಾಸಿ ಪ್ರಸಾದ್ ನಾಯ್ಡು (25) ಹಾಗೂ ಗೆಳೆಯರಿಗೆ ನಕಲಿ ಜಾಬ್ ಆಫರ್ ಲೆಟರ್ ನೀಡಿ 2.76 ಲಕ್ಷ ರೂ. ವಂಚಿಸಿದರೆ, ಕೆಲಸಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ದ ಮಧುಶಂಕರ್ (23) ಎಂಬುವರ ಮೊಬೈಲ್​ಗೆ ಲಿಂಕ್ ಕಳುಹಿಸಿ ಕ್ಲಿಕ್ ಮಾಡುವಂತೆ ಸೂಚಿಸಿ ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಲಪಟಾಯಿಸಲಾಗಿದೆ.

    ಪ್ರಸಾದ್ ನಾಯ್ಡು ವೆಬ್​ಸೈಟ್​ವೊಂದರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮ್ಮ ಮೊಬೈಲ್ ನಂಬರ್ ಸೇರಿ ಹಲವು ದಾಖಲೆ ಉಲ್ಲೇಖಿಸಿದ್ದರು. ಕೆಲದಿನಗಳ ಹಿಂದೆ ಕರೆ ಮಾಡಿದ ವ್ಯಕ್ತಿಯೊಬ್ಬ ಖಾಸಗಿ ಕಂಪನಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ವೆಬ್​ಸೈಟ್​ನಿಂದ ನಂಬರ್ ಪಡೆದಿರುವುದಾಗಿ ತಿಳಿಸಿದ್ದ.

    ಇದನ್ನೂ ಓದಿ: VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ

    ನಂತರ ಟ್ರೇನಿಂಗ್ ವಿಚಾರವಾಗಿ ನಾಯ್ಡು ಬಳಿ ಹಣ ಕೇಳಿದ್ದ. ಆನ್​ಲೈನ್ ಮೂಲಕ ಹಣ ಕಳುಹಿಸಿದ ಬಳಿಕ ಕಂಪನಿಯ ಜಾಬ್ ಆಫರ್ ಲೆಟರ್ ಮೇಲ್ ಮಾಡಿದ್ದ. ಜತೆಗೆ, ನಾಯ್ಡು ಕೋರಿಕೆ ಮೇರೆಗೆ ಅವರ ಮೂವರು ಸ್ನೇಹಿತರಿಗೂ ಜಾಬ್ ಆಫರ್ ಲೆಟರ್ ನೀಡಿದ್ದ. ಇದಾದ ಬಳಿಕ ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಆತ, ನಾಯ್ಡು ಅವರಿಂದ 36 ಸಾವಿರ ರೂ. ಅವರ ಸ್ನೇಹಿತರಾದ ಕುಮಾರ್ ಎಂಬುವರಿಂದ 1.5 ಲಕ್ಷ ರೂ., ರಮ್ಯಾರಿಂದ 78 ಸಾವಿರ ರೂ., ಮೋನಿಕಾ ಅವರಿಂದ 57 ಸಾವಿರ ರೂ. ಸೇರಿ ಒಟ್ಟು 2.76 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ. ಹಣ ಜಮೆಯಾದ ಬಳಿಕ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಆತ ನೀಡಿದ ಜಾಬ್ ಆಫರ್ ಲೆಟರ್ ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿದೆ. ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೊಬೈಲ್​ನಲ್ಲಿ ಲಿಂಕ್ ಕ್ಲಿಕ್ ಮಾಡಲು ಹೇಳಿ ಧೋಖಾ: ಉದ್ಯೋಗಕ್ಕಾಗಿ ಮಧುಶಂಕರ್ ಆನ್​ಲೈನ್​ನಲ್ಲಿ ಹುಡುಕಾಟ ನಡೆಸಿದ್ದರು. ಜು.17 ರಂದು ಅಪರಿಚಿತರು ಕರೆ ಮಾಡಿ, ನಾವು ಶೈನ್ ಡಾಟ್​ಕಾಮ್ಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದರು. ನಿಮಗೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಕೊಡುತ್ತೇವೆ. ಆದರೆ, ನಾವು ನಿಮ್ಮ ಮೊಬೈಲ್​ಗೆ ಕಳುಹಿಸುವ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನು ತುಂಬಿಸಿ 49 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದರು. ಅವರ ಮಾತನ್ನು ನಂಬಿದ ಮಧುಶಂಕರ್, ಅವರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಇದಾದ ಕೆಲ ಕ್ಷಣಗಳಲ್ಲಿ ಹಂತಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಡೆಬಿಟ್ ಆಗಿದೆ. ಬಳಿಕ ಅಪರಿಚಿತರಿಗೆ ಕರೆ ಮಾಡಿದರೆ ಸಂಪರ್ಕಕ್ಕೆಸಿಕ್ಕಿಲ್ಲ. ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗಡಿಯಲ್ಲಿ ಗುಂಡು ಹಾರಿಸೋಕೆ ನೇಪಾಳ ಪೊಲೀಸರೂ ಶುರುಮಾಡಿದ್ರು!: ಭಾರತೀಯನಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts