More

    ಚಳಿಗಾಲದಲ್ಲಿ ಕಾಡುವಂತಹ ಅನೇಕ ರೋಗಗಳಿಗೆ ಸೀತಾಫಲ ಮದ್ದು; ಶ್ವಾಸಕೋಶದ ಸಮಸ್ಯೆಗಳಿಂದ ಮುಕ್ತಿ..!

    ಸೀತಾಫಲವನ್ನು ಬಯಲು ಸೀಮೆ ಮಾತ್ರವಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲೂ ಬೆಳೆಸಬಹುದು. ಪರ್ವತಗಳಲ್ಲಿ ಬೆಳೆಯುವ ಹಣ್ಣುಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಹಸಿರು ಅಥವಾ ನೇರಳೆ ಬಣ್ಣದ ಹಣ್ಣುಗಳು ಹಣ್ಣಾದಾಗ ತುಂಬಾ ಗಟ್ಟಿಯಾಗಿರುತ್ತವೆ. ಬೇಯಿಸಿದಾಗ ಅದು ತುಂಬಾ ಮೃದುವಾಗುತ್ತದೆ. ಸೀತಾಫಲ ನೋಡಲು ಮುಳ್ಳಿನಂತೆ ಕಾಣಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ.

    ಸೀತಾಫಲ ಹಣ್ಣು ಶ್ವಾಸಕೋಶದಲ್ಲಿನ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶ್ವಾಸನಾಳದ ಟ್ಯೂಬ್‌ನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

    ಸೀತಾಫಲದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಸೀತಾಫಲ ಹಣ್ಣಿನ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ ಕಡಿಮೆ ಆಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

    ಸೀತಾಫಲ ಹಣ್ಣುಗಳನ್ನು ಹೆಚ್ಚಾಗಿ ಜ್ಯೂಸ್, ಸಲಾಡ್ ಮತ್ತು ಐಸ್ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ.

    ಸೀತಾಫಲ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಆಕ್ಸಿಡೆಂಟ್ ಇದೆ. ಸೀತಾಫಲ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ರಾಡಿಕಲ್ಸ್ ಉತ್ಪತ್ತಿ ಮಾಡುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದಿಲ್ಲ. ಇದರಲ್ಲಿರುವ ಉತ್ತಮ ಅಂಶಗಳು ನೀವು ಕಾಯಿಲೆ ಬೀಳದಂತೆ ಗಮನ ವಹಿಸುತ್ತದೆ. ಉತ್ತಮವಾದ ಚರ್ಮವನ್ನು ಹೊಂದಲು ಸಹಕಾರಿಯಾಗಿದೆ.

    ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

    1 ಕಪ್ ಸೀತಾಪಲ ಹಣ್ಣಿನಲ್ಲಿ ಒಂದು ದಿನಕ್ಕೆ ಬೇಕಾಗುವ 10% ಪೊಟ್ಯಾಶಿಯಂ, 6% ಮೆಗ್ನೀಷಿಯಂ ಅಂಶವಿದೆ. ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಅಂಶಗಳು ನಿಮ್ಮ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.ಸೀತಾಫಲ ಹಣ್ಣನ್ನು ತಿನ್ನುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts