More

    ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ

    ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ಹಾಗೂ ಸಾಗಣೆ ನಡೆಯುತ್ತಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ರಾಜ್ಯ ಗೆಳೆಯರ ಬಳಗದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.

    ತುಂಗಾ, ಭದ್ರಾ ನದಿಗಳು ಹಾಗೂ ಕೆಲವು ಕೆರೆಗಳಲ್ಲಿ ಅಕ್ರಮ ಮರಳುಗಾರಿಕೆ, ಮರಳು ಸಾಗಣೆ ನಡೆಯುತ್ತಿದೆ. ಅಕ್ರಮವಾಗಿ ಮಣ್ಣು ಸಾಗಣೆಯೂ ನಡೆಯುತ್ತಿದೆ. ಇದರಿಂದ ಇಡೀ ನಿಸರ್ಗವೇ ಹಾಳಾಗಿದ್ದು ನದಿಗಳು ಬತ್ತಿವೆ. ಶಿವಮೊಗ್ಗ ಸಮೀಪದ ಅಬ್ಬಲಗೆರೆ ಸುತ್ತಮುತ್ತ ಇರುವ ಎಲ್ಲ ಕೆರೆಗಳ ಮಣ್ಣನ್ನು ಲೂಟಿ ಮಾಡಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಿಲ್ಲ ಎಂದು ದೂರಿದರು.
    ಕೆಲವು ಸಚಿವರು ಈ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ ಸಂಬಂಧಪಟ್ಟ ಸಚಿವರು ಈ ಬಗ್ಗೆ ಗಮನಹರಿಸಬೇಕು. ಇಲ್ಲವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
    ರಾಜ್ಯ ಗೆಳೆಯರ ಬಳಗದ ಅಧ್ಯಕ್ಷ ಎಂ.ಆರ್.ಅನಿಲ್ ಕುಂಚಿ, ಪ್ರಮುಖರಾದ ಮಂಜುಳಾ, ಶಕುಂತಲಾ, ಪುರುಷೋತ್ತಮ್, ಡಿ. ಪರಮೇಶ್ವರ್, ಮಾಲಾ ಗೌಡ, ಅರ್ಜುನ್, ಅಭಿಷೇಕ್, ಪ್ರೇಮಾ, ಆದರ್ಶ್, ಕಲ್ಲೇಶ್, ನಿರ್ಮಲಾ, ಮಂಜಾನಾಯ್ಕ, ಲಂಕೇಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts