More

    ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಅಸ್ತಿತ್ವ

    ಶೃಂಗೇರಿ: ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

    ಮಂಗಳವಾರ ತಾಲೂಕು ಕಸಾಪ ಕಾರ್ಯಕಾರಿಣಿ ಮಂಡಳಿ ಸಭೆ ಹಾಗೂ ವಿಶ್ವ ಮಾತೃಭಾಷಾ ದಿನಾಚರಣೆಯಲ್ಲಿ ಮಾತನಾಡಿ,
    ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆಯಲ್ಲಿ ಸಾಂಸ್ಕೃತಿಕ ತಿರುಳು ಅಡಗಿದೆ. ವಚನ, ಕಾವ್ಯ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳು ಬೆಳಗಬೇಕಿದ್ದರೆ ಕನ್ನಡ ಹೃದಯ ಭಾಷೆಯಾಗಬೇಕು ಎಂದರು.
    ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಭಾಷೆಯ ಸೊಗಡಿದೆ. ಭಾಷೆ ಉನ್ನತಿಗಾಗಿ ಕನ್ನಡಿಗರು ನಿರಂತರ ಶ್ರಮಿಸಬೇಕು. ತಾಯಿ ಭುವನೇಶ್ವರಿ ಸೇವೆಗಾಗಿ ಕಸಾಪ ಎಲ್ಲ ಕಡೆ ಸಮ್ಮೇಳನಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
    ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕನ್ನಡಸಿರಿ ಪ್ರಶಸ್ತಿ ಪುರಸ್ಕೃತ ವಿಜಯವಾಣಿ ವರದಿಗಾರರಾದ ಶೋಭಾ ಅನಂತಯ್ಯ, ತಾಲೂಕು ಕಸಾಪ ಹೋಬಳಿ ಸಮ್ಮೇಳನದ ರೂವಾರಿ ದಿನೇಶ್ ಅಂಗುರ್ಡಿ, ತಾಲೂಕು ಕಸಾಪ ಕಾರ್ಯದರ್ಶಿ ಸುನೀತಾ ನವೀನ್ ಗೌಡ, ಪದಾಧಿಕಾರಿಗಳಾದ ಕೆ.ಎಸ್.ರಮೇಶ್, ನಾಗೇಶ್‌ಕಾಮತ್ ಅವರನ್ನು ಅಭಿನಂದಿಸಲಾಯಿತು.
    ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಜಿಲ್ಲಾ ಕಸಾಪ ಸಂಚಾಲಕ ಓಣಿತೋಟ ರತ್ನಾಕರ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಗೌರವ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷೆ ಕೌಸ್ತುಭ ಎಂ ಭಟ್, ಪದಾಧಿಕಾರಿ ರಮೇಶ್ ಶೂನ್ಯ, ಡಾ. ಜಾನಪದ ಎಸ್.ಬಾಲಾಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts