More

    ಸಂಸ್ಕೃತಿ, ಸಂಪ್ರದಾಯ ಮರೆತರೆ ಸಾಮಾಜಿಕ ವ್ಯವಸ್ಥೆ ಏರುಪೇರು

    ಬ್ಯಾಡಗಿ: ಸಂಸ್ಕೃತಿ, ಸಂಪ್ರದಾಯ ಮರೆತರೆ ಸಾಮಾಜಿಕ ವ್ಯವಸ್ಥೆ ಏರುಪೇರಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮ ಪರಂಪರೆ ಉಳಿಸಬೇಕಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಡಾ. ಪುಟ್ಟರಾಜ ಗವಾಯಿಗಳ 12ನೇ ಪುಣ್ಯಾರಾಧನೆ ಹಾಗೂ ಹಾನಗಲ್ಲ ಗುರು ಕುಮಾರಸ್ವಾಮಿಗಳ 156ನೇ ಜಯಂತ್ಯುತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು.

    ಪ್ರಾಚೀಲ ಕಾಲದಿಂದಲೂ ಗುರುಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದ್ದು, ಇಂದಿಗೂ ಮುನ್ನಡೆದು ಬಂದಿದೆ. ಆಧುನಿಕ ವ್ಯವಸ್ಥೆಯಲ್ಲಿ ಕೆಲ ಸಂಪ್ರದಾಯ ಆಚರಣೆಗಳಲ್ಲಿ ವ್ಯತ್ಯಾಸವಾದರೂ ಧಾರ್ಮಿಕ ನಿಲುವುಗಳು ಬದಲಾಗಲು ಸಾಧ್ಯವಿಲ್ಲ. ಯುವಪೀಳಿಗೆಯಲ್ಲಿ ಧರ್ಮಜಾಗೃತಿ ಮೂಡಿಸಬೇಕಿದೆ ಎಂದರು.
    ಪಂ. ಪಂಚಾಕ್ಷರ ಗವಾಯಿಗಳು ಊರೂರು ತಿರುಗಿ, ನಾಡಿನ ಧಾರ್ಮಿಕ ಪರಂಪರೆ ಉಳಿಸುವಲ್ಲಿ ಶ್ರಮಿಸಿದ್ದಾರೆ. ಬಡವರು, ದೀನರು ಹಾಗೂ ಸಂಕಷ್ಟದಲ್ಲಿ ಸಿಲುಕಿದವರನ್ನು ಮೇಲೆತ್ತಲು ಹಲವು ಸಾಮಾಜಿಕ ಕಾರ್ಯಕ್ರಮ ಹಾಕಿಕೊಂಡಿದ್ದರು. ಡಾ.ಪುಟ್ಟರಾಜ ಗವಾಯಿಗಳಿಗೆ ಸಂಗೀತ ಸಾಧನೆ ಮಾಡಿಸಿ, ಗದಗನ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಸಾವಿರಾರು ಅಂಧರಿಗೆ ಬೆಳಕು ನೀಡಿದರು. ಹೀಗಾಗಿ ದೇಶಾದ್ಯಂತ ಪುಟ್ಟರಾಜರ ಕೀರ್ತಿ ಹೆಚ್ಚಿದೆ ಎಂದರು.

    ಸಾಕಷ್ಟು ಶರಣರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಎಲ್ಲರ ಸಿದ್ಧಾಂತಗಳು ಸಮಾಜದ ಒಳಿತನ್ನು ಬಯಸಿದ್ದು, ಶರಣರ ನಡೆನುಡಿ ಜೀವನಾದರ್ಶಗಳು ಪ್ರಸಕ್ತ ಸಮಾಜಕ್ಕೆ ದಾರಿದೀಪಗಳಾಗಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಯುವಪೀಳಗೆ ದುಶ್ಚಟಗಳಿಂದ ದೂರ ಉಳಿಯಲು ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

    ಗ್ರಾಮಸ್ಥರಾದ ಮಹಾದೇವಪ್ಪ ಶಿಡೇನೂರು, ಪರಮೇಶ್ವರಯ್ಯ ಮಠದ, ಚನ್ನಬಸಪ್ಪ ಹುಲ್ಲತ್ತಿ, ಗ್ರಾಪಂ ಸದಸ್ಯರಾದ ಜಗದೀಶ ಕೆರಕರ, ವೀರೇಶ ಅಂಗಡಿ, ಬಸವ್ವ ಏಳುಕೊಳಗದ, ಬಸವರಾಜ ಹಲಗೇರಿ, ರುದ್ರಪ್ಪ ಬ್ಯಾಡಗಿ, ವಿ.ಕೆ. ಅಂಗಡಿ, ಸಿದ್ದಯ್ಯ ಪಾಟೀಲ, ಮಲ್ಲಕಪ್ಪ ಅರಳಿಕಟ್ಟಿ, ಚಂದ್ರಪ್ಪ ಬ್ಯಾಡಗಿ, ಮುರಡೆಪ್ಪ ಶಿಡೇನೂರು, ಬಸಯ್ಯ ಹಿರೇಮಠ, ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts