More

    ಜೀವನದಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳುವುದು ಅವಶ್ಯ: ಉಜ್ಜಯಿನಿ ಶ್ರೀಗಳ ಆಶೀರ್ವಚನ

    ಶಿರಾಳಕೊಪ್ಪ: ಪ್ರತಿಯೊಂದರ ಸತ್ಯಾಸತ್ಯತೆಯು ನಮ್ಮ ದೃಷ್ಟಿಯಲ್ಲಿ ಅಡಗಿದೆ. ಜೀವನದಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ ಬೆಳೆಸಿಕೊಂಡು ನಡೆಯುವುದು ಅವಶ್ಯ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ಭಾನುವಾರ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಕೋರಿಕೆಯ ಮೇರೆಗೆ ಶ್ರೀಲಂಕಾದಲ್ಲಿ ಮುಕ್ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ್ದು ಇತಿಹಾಸವಾದರೂ ಅದು ಇಂದಿಗೂ ಸತ್ಯವಾಗಿದೆ. ಶ್ರೀಲಂಕಾದ ಜಾಫ್ನಾದಿಂದ ಉತ್ತರಕ್ಕೆ ೧೪೦ ಕಿಮೀ ಅಂತರದಲ್ಲಿರುವ ಲಿಂಗಮಲೈ ಹತ್ತಿರ ರೇಣುಕವನ-ರೇಣುಕ ಗ್ರಾಮವಿದ್ದು ಅಲ್ಲಿಗೆ ಭೇಟಿ ನೀಡಿದರೆ ಆ ಸಂಪೂರ್ಣ ಪ್ರದೇಶ ಲಿಂಗಮಯವಾಗಿರುವುದನ್ನು ಕಾಣಬಹುದಾಗಿದೆ. ರೇಣುಕರ ಹೆಸರನ್ನು ಹೊಂದಿದ ಅನೇಕ ಜನರು ಅಲ್ಲಿದ್ದಾರೆ. ಹೊರದೇಶದವರು ಒಪ್ಪುವ ಈ ಪರಂಪರೆಯನ್ನು ನಮ್ಮವರು ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.
    ಶ್ರೀ ಜಗದ್ಗುರು ರೇಣುಕಾಚಾರ್ಯರ ಎಲ್ಲ ಅವತಾರಗಳು, ಎಲ್ಲ ಸಾಕ್ಷಾತ್ಕಾರಗಳು ಸತ್ಯವಾಗಿವೆ. ಇಲ್ಲಿ ನಿರ್ಮಾಣಗೊಂಡಿರುವ ೩೬ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನೋಡಿದಾಗ ಸಾಕ್ಷಾತ್ ರೇಣುಕರು ಇಲ್ಲಿದ್ದಾರೆ ಎಂಬ ಭಾವ ಮೂಡುತ್ತದೆ. ಜನರ ಮನದಲ್ಲಿ ಆಧ್ಯಾತ್ಮದ ಬೀಜ ಬಿತ್ತಬೇಕು. ಪಂಚಪೀಠಗಳ ಆಶೀರ್ವಾದದಿಂದ ಈ ಕ್ಷೇತ್ರ ಆಧ್ಯಾತ್ಮಿಕ ಕೇಂದ್ರವಾಗಿ, ನೆಮ್ಮದಿ ನೀಡುವ ತಾಣವಾಗಿ ಜನರ ಕಷ್ಟ ಕಾರ್ಪಣ್ಯ ದೂರ ಮಾಡುವ ಸ್ಥಳವಾಗಿ ಬೆಳೆಯುತ್ತಿದೆ. ಇದರ ಹಿಂದೆ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರ ಬೆವರ ಹನಿ ಜತೆಗೆ ತಪಸ್ಸಿನ ಶಕ್ತಿ ಇದೆ. ನಿಷ್ಕಾಮ ಸಂಕಲ್ಪದಿAದ ಕ್ಷೇತ್ರವನ್ನು ಬೆಳೆಸಿದ್ದಾರೆ. ಈ ಕ್ಷೇತ್ರ ಇನ್ನೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
    ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ನೇತೃತ್ವ ವಹಿಸಿ ಮಾತನಾಡಿದರು. ಮಣಕೂರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಜಡೆಯ ಶ್ರೀ ಡಾ.ಮಹಾಂತ ಸ್ವಾಮೀಜಿ, ಕಾರ್ಜುವಳ್ಳಿ ಶ್ರೀ ಸದಾಶಿವ ಶಿವಾಚಾರ್ಯರು, ಹಾರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು, ಕಡೆನಂದಿಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯರು, ಕ.ಮಾರಾಟ ಮಹಾಮಂಡಳದ ನಿರ್ದೇಶಕ ಅಗಡಿ ಅಶೋಕ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರಿಗೆ ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
    ತಡಸನಹಳ್ಳಿ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆ ಹಾಗೂ ಶಾಂತಿನಿಕೇತನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಇದಕ್ಕೂ ಮುನ್ನ ರೋಣದ ರೇಣುಕಯ್ಯ ಶಾಸ್ತಿçಗಳಿಂದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪುರಾಣ ಪ್ರವಚನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts