More

    ಕಣಕುಂಬಿಯಲ್ಲಿ ಕೋಟಿ ಜಪಯಜ್ಞ ಏ. 6ರಂದು

    ನರಗುಂದ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ಆಗ್ರಹಿಸಿ ಏ. 6ರಂದು ಮಹದಾಯಿ ಉಗಮ ಸ್ಥಾನ ಕಣಕುಂಬಿಯಲ್ಲಿ ರೈತರಿಂದ ನಿರಂತರ ಕೋಟಿ ಜಪಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತಸೇನಾ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

    ಪಟ್ಟಣದ ಎ.ಪಿ. ಪಾಟೀಲ ಅವರ ಗೋದಾಮಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 4 ಜಿಲ್ಲೆ, 12 ತಾಲೂಕಿನ ಮಹದಾಯಿ ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಟ್ಟಣದಲ್ಲಿ 2074 ದಿನಗಳಿಂದ ನಿರಂತರ ಹೋರಾಟ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಈಗಾಗಲೇ ನಮ್ಮ ರಾಜ್ಯಕ್ಕೆ 13.5 ಟಿಎಂಸಿ ನೀರನ್ನು ಹಂಚಿಕೆ ಮಾಡಿ ಆದೇಶಿಸಿದೆ. ಈ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಕಳೆದ ವರ್ಷ 500 ಕೋಟಿ, ಪ್ರಸಕ್ತ ವರ್ಷ 1677 ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿರಿಸಿದೆ. ಆದರೆ, ಯಾವುದೇ ಕಾಮಗಾರಿ ಕೈಗೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮಹದಾಯಿ, ಕಳಸಾ ಬಂಡೂರಿ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಜನಪ್ರತಿನಿಧಿಗಳನ್ನು ಸಂರ್ಪಸಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಮಹತ್ವದ ಯೋಜನೆಯ ಕಾಮಗಾರಿಗೆ ತಕ್ಷಣವೇ ಚಾಲನೆ ನೀಡುವಂತೆ ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಸಾವಿರಾರು ರೈತರಿಂದ ಕಣಕುಂಬಿಯಲ್ಲಿ ಏ. 6ರಂದು ನಿರಂತರ ಕೋಟಿ ಜಪಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಎ.ಪಿ. ಪಾಟೀಲ, ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ಎಸ್.ಬಿ. ಜೋಗಣ್ಣವರ, ಪಂಚಪ್ಪ ಹನಸಿ, ರಾಮನಗೌಡ ಕಿತ್ತೂರ, ಹನುಮಂತ ಸರನಾಯ್ಕರ, ಹನುಮಂತ ಮಡಿವಾಳರ, ಸುಭಾಸ ಗಿರಿಯಣ್ಣವರ, ಅರ್ಜುನ ಮಾನೆ, ಅನಸವ್ವ ಶಿಂಧೆ, ರತ್ನವ್ವ ಸವಳಬಾವಿ, ಹೇಮಕ್ಕ ಘಾಳಿ, ಲಚ್ಚೆವ್ವ ಜ್ಯೋತೆಣ್ಣವರ, ಶಾಂತವ್ವ ಪೂಜಾರ, ದೇವಕ್ಕ ಚೆಲುವಣ್ಣವರ, ರಿಯಾಜ್ ಪಠಾಣ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts