More

    ಅಪರಾಧ ತಡೆಗೆ ಜನರ ಸಹಕಾರ ಅವಶ್ಯ

    ಘಟಪ್ರಭಾ: ಗೋಕಾಕ- ಘಟಪ್ರಭಾ ರಸ್ತೆಯಲ್ಲಿ ಹೆಚ್ಚಿನ ಅಪಘಾತ ಹಾಗೂ ದರೋಡೆ ಪ್ರಕರಣಗಳು ನಡೆಯುತ್ತಿವೆ. ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಾಕರ ನೀಡಬೇಕು. ರಸ್ತೆ ಅಪಘಾತಗಳನ್ನು ತೆಡೆಯಲು ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಗೋಕಾಕ ಡಿವೈಎಸ್‌ಪಿ ಡಿ.ಟಿ. ಪ್ರಭು ಹೇಳಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಗೋಕಾಕ ಉಪವಿಭಾಗದಿಂದ ಘಟಪ್ರಭಾ ಪೋಲಿಸ್ ಠಾಣೆವರೆಗೆ ಈಚೆಗೆ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಜನರ ಸುರಕ್ಷತೆ ಕಡೆಗೆ’ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದರು.

    ಗೋಕಾಕ ಘಟಪ್ರಭಾ ರಸ್ತೆಯಲ್ಲಿ ಹೆಚ್ಚಿನ ಅಪಘಾತ ಹಾಗೂ ದರೋಡೆ ಪ್ರಕರಣಗಳು ನಡೆಯುತ್ತಿದೆ. ಪ್ರವಾಹ ಸಂದರ್ಭದಲ್ಲಿ ಹಾಳಾದ ಮನೆಗಳ ಬಾಗಿಲು, ಕಿಟಕಿಗಳನ್ನು ಹೋಳಿ ಹುಣ್ಣಿಮೆಯ ಕಾಮದಾನಕ್ಕೆ ಬಳಸಿ ಜನರಿಗೆ ತೊಂದರೆ ನೀಡಬೇಡಿ. ಭೀತಿ ಹುಟ್ಟಿಸಿರುವ ಕರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ಬಣ್ಣದಾಟದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

    ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರಿಗಾಗಿ ಹಗಲು ರಾತ್ರಿ ಎನ್ನದೆ ತನ್ನ ಕುಟುಂಬವನ್ನು ಗಣನೆಗೆ ತೆಗೆದುಕೊಳ್ಳದೆ ಸಾರ್ವಜನಿಕರ ಕೆಲಸ ಮಾಡುವ ಪೊಲೀಸ್ ಇಲಾಖೆ ಬಗ್ಗೆ ಎಲ್ಲರೂ ಗೌರವ ಹೊಂದಿರಬೇಕು. ಅವರ ಕಠಿಣ ಸೇವೆಯಿಂದಲೆ ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯ. ಅಪರಾಧ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಮಲ್ಲಿಕಾರ್ಜುನ ಸ್ವಾಮೀಜಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಗೋಕಾಕ ಸಿಪಿಐ ಗೋಪಾಲ ರಾಠೋಡ, ಧುಪದಾಳ ಗ್ರಾಪಂ ಅಧ್ಯಕ್ಷ ಎಸ್.ಐ. ಬೆನವಾಡಿ, ರಾಮಣ್ಣ ಹುಕ್ಕೇರಿ, ಗಣೇಶ ಇಳಿಗೇರ, ಬಸರಾಜ ಖಾನಪ್ಪನ್ನವರ, ಸುಧೀರ ಜೋಡಟ್ಟಿ, ಆರ್‌ಎಫ್‌ಒ ಕೆ.ಎನ್. ವಣ್ಣೂರ, ಸೋಮಶೇಖರ ಮಗದುಮ್ಮ, ಕಿರಣ ಡಮಗರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts