More

    ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಐಪಿಎಲ್-2020 ಇಲೆವೆನ್‌ನಲ್ಲಿ ಕೊಹ್ಲಿ, ರೋಹಿತ್‌ಗಿಲ್ಲ ಸ್ಥಾನ

    ದುಬೈ: ಕೋವಿಡ್-19 ಮಹಾಮಾರಿಯ ಅಬ್ಬರದ ನಡುವೆಯೂ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕಡೇ ಹಂತಕ್ಕೆ ಬಂತು ತಲುಪಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವಿನ 2ನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಜಯ ದಾಖಲಿಸಿದ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ಎದುರಿಸಲಿದೆ. ಇದರ ಮಧ್ಯೆ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಪ್ರಸಕ್ತ ಟೂರ್ನಿಯಲ್ಲಿ 11 ಆಟಗಾರರನ್ನು ಆರಿಸಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಅವರಿಗೆ ಮಂಜ್ರೇಕರ್ ಸ್ಥಾನ ನೀಡಿಲ್ಲ..

    ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಆಯೋಜಿಸಲಾಗಿತ್ತು. ಯಾವುದೇ ಸದ್ದು ಗದ್ದಲವಿಲ್ಲದೆ, ದೂರದ ಅರಬ್‌ರಾಷ್ಟ್ರದಲ್ಲಿ ಐಪಿಎಲ್ ಆಯೋಜಿಸಲಾಗಿದೆ. ದೇವದತ್ ಪಡಿಕಲ್, ಅನ್ರಿಚ್ ನೋರ್ಜೆರಂಥ ಪ್ರತಿಭೆಗಳು ಈ ಲೀಗ್‌ನಲ್ಲಿ ಅನಾವರಣಗೊಂಡರು. ಲೀಗ್‌ನಲ್ಲಿ ಇದುವರೆಗೂ ನಡೆದಿರುವ 58 ಪಂದ್ಯಗಳಲ್ಲಿ ಆಟಗಾರರ ನಿರ್ವಹಣೆ ಅವಲೋಕಿಸಿ ಸಂಜಯ್ ಮಂಜ್ರೇಕರ್ ಒಂದು ತಂಡ ಪ್ರಕಟಿಸಿದ್ದಾರೆ. ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಯಕತ್ವದ ಜತೆಗೆ ವಿಕೆಪ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದ ರಾಹುಲ್ ಅವರನ್ನು  ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

    ಮೂರನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಲಾಗಿದೆ.
    ಮಂಜ್ರೇಕರ್ ತಂಡ: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್‌, ನಿಕೋಲಸ್ ಪೂರನ್, ಅಕ್ಷರ್ ಪಟೇಲ್, ರಶೀದ್ ಖಾನ್, ಜ್ರೋಾ ಆರ್ಚರ್, ಯಜುವೇಂದ್ರ ಚಾಹಲ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts