More

    ಕೋವಿಡ್ ಸಕ್ರಿಯ ಪ್ರಮಾಣ ಇಳಿಕೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿದಿವೆ. ದ.ಕ. ಜಿಲ್ಲೆಯಲ್ಲಿ ಭಾನುವಾರ ಹೊಸ 648 ಜನರಲ್ಲಿ(ಸೋಂಕು ಪ್ರಮಾಣ ಶೇ.8.52) ಕರೊನಾ ಸೋಂಕು ದೃಢಪಟ್ಟಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 703 ಮಂದಿ ಗುಣವಾವಾಗಿದ್ದು, ಚಿಕಿತ್ಸೆಯಲ್ಲಿರುವವರ ಸಂಖ್ಯೆ(ಸಕ್ರಿಯ ಪ್ರಕರಣಗಳು) 6,954ಕ್ಕೆ ಇಳಿದಿದೆ.

    ಆದರೆ, ಸೋಂಕಿನಿಂದ ಮರಣದ ಸಂಖ್ಯೆ ಏರುಗತಿಯಲ್ಲೇ ಸಾಗಿದೆ. ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಆರು ಸೋಂಕಿತರು ಮೃತಪಟ್ಟಿದ್ದಾರೆ. ಇವರ ಪೈಕಿ ಮೂವರು ಮಂಗಳೂರು ನಿವಾಸಿಗಳು, ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರಿನಿಂದ ಓರ್ವರು ಇದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ 84,393 ಸೋಂಕಿಗೆ ಒಳಗಾಗಿ, 76,456 ಜನರು ಗುಣವಾಗಿದ್ದಾರೆ. ಕಾಸರಗೋಡು ಜಿಲ್ಲೆಯ 326 ಮಂದಿಯಲ್ಲಿ ಸೋಮವಾರ ಸೋಂಕು ಕಾಣಿಸಿಕೊಂಡಿದೆ.

    ಉಡುಪಿ ಜಿಲ್ಲೆಯಲ್ಲಿ ಸೋಮವಾರ 123 ಮಂದಿಗೆ ಕರೊನಾ ದೃಢಪಟ್ಟಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ 75 ವರ್ಷದ ಮಹಿಳೆ ಹಾಗೂ 53 ವರ್ಷದ ಪುರುಷ ಮೃತಪಟ್ಟವರು. ಸೋಂಕಿತರಲ್ಲಿ 66 ಮಂದಿ ಉಡುಪಿ, 43 ಮಂದಿ ಕುಂದಾಪುರ, 11ಮಂದಿ ಕಾರ್ಕಳ ತಾಲೂಕಿನವರು. ಮೂವರು ಹೊರ ಜಿಲ್ಲೆಯವರು. 30 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 12 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 111 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 460 ಮಂದಿ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ 2,883 ಸಕ್ರಿಯ ಪ್ರಕರಣಗಳಿವೆ.

    ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಕುಂದಾಪುರ ಮೂಲದ ಓರ್ವನಲ್ಲಿ ಕಪ್ಪು ಶಿಲೀಂಧ್ರ ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 7 ಸಕ್ರಿಯ ಪ್ರಕರಣಗಳಿವೆ. ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬ್ಲ್ಯಾಕ್ ಫಂಗಸ್ ಹೊಸ ಪ್ರಕರಣ ವರದಿಯಾಗಿಲ್ಲ. ಆದರೆ ಸೋಂಕಿತ, ಶಿವಮೊಗ್ಗ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 44 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 9 ಮಂದಿ ದಕ್ಷಿಣ ಕನ್ನಡದವರು. ಉಳಿದವರು 35 ಮಂದಿ ಹೊರ ಜಿಲ್ಲೆಯವರು. ಬ್ಲ್ಯಾಕ್ ಫಂಗಸ್ ರೋಗಕ್ಕೆ ಒಳಗಾದವರಲ್ಲಿ 15 ಮಂದಿ ಇಲ್ಲಿಯ ತನಕ ಮೃತಪಟ್ಟಿದ್ದು, ಇವರಲ್ಲಿ ಇಬ್ಬರು ಜಿಲ್ಲೆಯವರು. ಉಳಿದವರು ಹೊರ ಜಿಲ್ಲೆಯವರು. 13 ಜನರು ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts