More

    ಐ ಆ್ಯಮ್​ ಆಲ್ಸೋ ಹೆಲ್ಪ್​ಲೆಸ್​… ಎನ್ನುತ್ತ ಬೇಸರ ವ್ಯಕ್ತಪಡಿಸಿದ ಸಚಿವ ಸುಧಾಕರ್​

    ಮೈಸೂರು: ಚುನಾವಣೆ ಪ್ರಚಾರದಲ್ಲಿ ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿಚಾರವಾಗಿ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ‘ಐ ಆ್ಯಮ್​ ಆಲ್ಸೋ ಹೆಲ್ಪ್​ಲೆಸ್​’ ಎಂದಿದ್ದಾರೆ.

    ಕರೊನಾ ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ. ನಾನು ಕೂಡ ಕಡ್ಡಾಯವಾಗಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ಇದು ನಮಗೂ ಅನ್ವಯ ಆಗುತ್ತದೆ. ರಾಜಕೀಯ ಪಕ್ಷಗಳ ರ್ಯಾಲಿಗಳ ವಿಚಾರದಲ್ಲೂ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೆ. ಆದರೆ, ಇದು ಪಾಲನೆ ಆಗಿಲ್ಲ ಅನ್ನೋದು ನನಗೂ ಬೇಸರ ಇದೆ ಎಂದು ಸುದ್ದಿಗಾರರ ಬಳಿ ಡಾ.ಸುಧಾಕರ್ ಹೇಳಿದರು.

    ಕೋವಿಡ್​ ನಿಯಮ ಪಾಲಿಸುವಿಕೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು. ಅದನ್ನು ಮರೆತಿರುವುದು ದುರದೃಷ್ಟ ಎಂದ ಸಚಿವ ಸುಧಾಕರ್​, ಈ ಬಗ್ಗೆ ದಂಡ ಹಾಕಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ದಂಡ ಎಲ್ಲರಿಗೂ ಅನ್ವಯ ಆಗುತ್ತೆ ಎಂದರು.

    ಉಪ ಚುನಾವಣೆ ಹಿನ್ನೆಲೆ ಆರ್​ ಆರ್​ ನಗರ ಮತ್ತು ಶಿರಾ ಕ್ಷೇತ್ರ ಕರೊನಾ ಹಾಟ್​ಸ್ಪಾಟ್​ನಂತಾಗಿತ್ತು. ಶಿರಾದಲ್ಲಿ ಜಿದ್ದಾಜಿದ್ದಿಗೆ ಬಿದ್ದವರಂತೆ ನಾಮಪತ್ರ ಸಲ್ಲಿಕೆ ವೇಳೆ ಮೂರು ಪಕ್ಷಗಳೂ ಸಾವಿರಾರು ಜನರೊಂದಿಗೆ ನಗರದಲ್ಲಿ ಬೃಹತ್​ ರ‍್ಯಾಲಿ ನಡೆಸಿದ್ದವು. ಇನ್ನು ಆರ್​ಆರ್​ನಗರದಲ್ಲೂ ಇದು ಹೊರತಾಗಿರಲಿಲ್ಲ. ನಟ ದರ್ಶನ್​ ಪ್ರಚಾರಕ್ಕೆ ಬಂದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದರು.

    ಜಯಚಂದ್ರ ಕೇಳಿದ್ದನ್ನ ಡಿಕೆಶಿ ಕೊಡ್ಲಿಲ್ವಂತೆ… ಅದಕ್ಕೆ ಶಿರಾದಲ್ಲಿ ಕಾಂಗ್ರೆಸ್​ ಸೋಲ್ತಂತೆ!

    ಆರ್​ ಆರ್​ ನಗರ, ಶಿರಾದಲ್ಲಿ ಕಾಂಗ್ರೆಸ್​ ಸೋಲಿಗೆ ಪ್ರಮುಖ ಕಾರಣ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts