More

    ಪುರುಷರೇ ಎಚ್ಚರ..ಕೊವಿಡ್-19 ಕಣ್ಣು ನಿಮ್ಮ ಮೇಲಿದೆ; ಐಡಿಎಸ್​ಪಿ ಬಿಚ್ಚಿಟ್ಟ ಆತಂಕಕಾರಿ ವಿಷಯ ಇದು

    ನವದೆಹಲಿ: ಕೊವಿಡ್​-19 ಸೋಂಕಿನ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ವೈರಸ್​ ತಗುಲುವ ಪ್ರಮಾಣ ಪುರುಷರಿಗೇ ಹೆಚ್ಚು ಎಂಬ ಸತ್ಯ ಬೆಳಕಿಗೆ ಬಂದಿದೆ.

    ಮಹಿಳೆಯರಿಗೆ ಸೋಂಕು ತಗುಲುವ ಎರಡು ಪಟ್ಟು ಹೆಚ್ಚು ಪುರುಷರಿಗೆ ವೈರಸ್​ ತಗುಲುತ್ತಿದೆ ಎಂದು ಅಧ್ಯಯನ ತಿಳಿಸಿದೆ. ಅದರಲ್ಲೂ 19-35 ವರ್ಷದವರೇ ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ.

    ಸುಮಾರು 5.16 ಲಕ್ಷ ಅಂದರೆ ಶೇ.65.11 ರಷ್ಟು ಪುರುಷರಿಗೆ ಕರೊನಾ ತಗುಲಿದ್ದರೆ, ಸುಮಾರು 2.76 ಲಕ್ಷ ಅಂದರೆ 34.89 ಶೇಕಡಾ ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂಕಿಸಂಖ್ಯೆ ಹೊರಬಿದ್ದಿದೆ.

    ಅದರಲ್ಲೂ ಶೇ.33.12 ರಷ್ಟು 19-35ವರ್ಷದವರಿಗೆ ಕರೊನಾ ತಗುಲುತ್ತಿದ್ದರೆ, ಶೇ.7.7ರಷ್ಟು ಮಾತ್ರ 65 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ವರದಿ ಬಹಿರಂಗಗೊಳಿಸಿದೆ.

    ಇಂಟಿಗ್ರೇಟೆಡ್​ ಡಿಸೀಸ್​ ಕಣ್ಗಾವಲು ಇಲಾಖೆ (ಐಡಿಎಸ್​ಪಿ)ಯ ಸಮೀಕ್ಷೆ ಪ್ರಕಾರ ಶೇ.48 ರಷ್ಟು 60 ವರ್ಷದಳೊಗಿನವರು ಕೊವಿಡ್​-19ನಿಂದ ಸಾಯುತ್ತಿದ್ದರೆ, 60 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಶೇ.51.9ರಷ್ಟು ಸಾವನ್ನಪ್ಪುತ್ತಿದ್ದಾರೆ.
    ಅದರಲ್ಲೂ ಶೇ.68 ರಷ್ಟು ಪುರುಷರು ಮತ್ತು ಶೇ.32ರಷ್ಟು ಮಹಿಳೆಯರು ಕೊವಿಡ್​ನಿಂದ ಸಾಯುತ್ತಿದ್ದಾರೆಂದು ಐಡಿಎಸ್​ಪಿ ತಿಳಿಸಿದೆ. (ಏಜೆನ್ಸೀಸ್​)

    8 ಲಕ್ಷದ ಸಮೀಪಕ್ಕೆ ಬಂತು ದೇಶದ ಕೊವಿಡ್​-19 ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣವೂ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts