More

    ಕೋವಿಡ್ ಪ್ರಕರಣ ತುಸು ಇಳಿಕೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನ ಸತತವಾಗಿ 1000 ಪ್ಲಸ್ ಬರುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶನಿವಾರ ತುಸು ಇಳಿಕೆ ಕಂಡಿದೆ. 933 ಮಂದಿಗೆ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

    404 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಒಟ್ಟು ಸಂಖ್ಯೆ 46,042ಕ್ಕೇರಿದ್ದು, 7,013 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 759 ಮಂದಿ ಮೃತಪಟ್ಟಿದ್ದಾರೆ.

    ಬಂಟ್ವಾಳ ತಾಲೂಕಿನ ಮನೆಯೊಂದರಲ್ಲಿ 5 ಮಂದಿಗೆ ಕರೊನಾ ದೃಢಪಟ್ಟಿದ್ದು, ಆ ಮನೆಯನ್ನು ಕಂಟೇನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.
    ಉಡುಪಿ ಜಿಲ್ಲೆಯಲ್ಲಿ ಶನಿವಾರ 430 ಮಂದಿಗೆ ಕರೊನಾ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಕುಂದಾಪುರದ 94 ವರ್ಷದ ಮಹಿಳೆ, ಉಡುಪಿಯ 64 ವರ್ಷದ ಪುರುಷ ಹಾಗೂ 73 ವರ್ಷದ ಮಹಿಳೆ ಮೃತಪಟ್ಟವರು. ಸೋಂಕಿತರಲ್ಲಿ 226 ಮಂದಿ ಉಡುಪಿ, 162 ಮಂದಿ ಕುಂದಾಪುರ, 39 ಮಂದಿ ಕಾರ್ಕಳ ತಾಲೂಕಿನವರು, ಮೂವರು ಹೊರ ಜಿಲ್ಲೆಯವರು. ಸಕ್ರಿಯ ಪ್ರಕರಣ ಸಂಖ್ಯೆ 2,643ಕ್ಕೆ ಹಾಗೂ ಮೃತರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ.

    ಕಾಸರಗೋಡಿನ 1,006 ಕೇಸ್: ಕಾಸರಗೋಡು ಜಿಲ್ಲೆಯ 1,006 ಮಂದಿ ಸಹಿತ ಕೇರಳದಲ್ಲಿ ಶನಿವಾರ 35,636 ಮಂದಿಗೆ ಕೋವಿಡ್-19 ಬಾಧಿಸಿದೆ. 48 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 5,356ಕ್ಕೇರಿದೆ. ಕಾಸರಗೋಡು ಜಿಲ್ಲೆಯ 93 ಮಂದಿ ಸೇರಿ ಶನಿವಾರ 15,493 ಮಂದಿ ಗುಣಮುಖರಾಗಿದ್ದಾರೆ.

    ಲಸಿಕೆ ವಿತರಣೆ ಪ್ರಗತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 60 ವರ್ಷ ಮೇಲ್ಪಟ್ಟ 842 ಮಂದಿ ಮೊದಲನೇ ಡೋಸ್, 1222 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 36 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 65 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 31 ಮಂದಿ ್ರಂಟ್‌ಲೈನ್ ವರ್ಕರ್ಸ್‌ ಮೊದಲನೇ ಡೋಸ್, 32 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 60 ವರ್ಷದೊಳಗಿನ 1763 ಮಂದಿ ಮೊದಲನೇ ಡೋಸ್, 599 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts