More

    ಕರೊನಾ ಸೋಂಕಿನ ಜತೆಗೆ ಮರಣ ಪ್ರಮಾಣವೂ ಹೆಚ್ಚಳ; ರಾಜ್ಯದಲ್ಲಿ ಒಂದೇ ದಿನ 52 ಮಂದಿ ಸಾವು

    ತುರ್ತು ನಿಗಾ ಘಟಕದಲ್ಲಿ 470ಕ್ಕೆ ಏರಿದ ಸೋಂಕಿತರ ಸಂಖ್ಯೆ | 11 ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿರುವ ಕರೊನಾ ಸೋಂಕು | 75,985ಕ್ಕೆ ಏರಿದ ಸಕ್ರಿಯ ಪ್ರಕರಣಗಳ ಸಂಖ್ಯೆ

    ಬೆಂಗಳೂರು: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಬೆಂಗಳೂರಿನಲ್ಲಿ 40 ಮಂದಿ ಸೇರಿ ರಾಜ್ಯದಲ್ಲಿ ಸೋಮವಾರ ಒಟ್ಟು 52 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 12,941 ತಲುಪಿದ್ದು, ಕಳೆದ ಆರು ತಿಂಗಳ ನಂತರ ಇದು ಅತಿ ಹೆಚ್ಚಿನ ಮರಣ ಪ್ರಮಾಣವಾಗಿದೆ.

    ಇದೇ ವೇಳೆ ಸೋಂಕಿತರಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತಿರುವವರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ 176 ಮಂದಿ ಸೇರಿ ರಾಜ್ಯಾದ್ಯಂತ 470 ಮಂದಿ ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ 9,579 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 75,985ಕ್ಕೆ ಏರಿದೆ. ಈವರೆಗಿನ ಸೋಂಕಿತರ ಸಂಖ್ಯೆ 10.74 ಲಕ್ಷ ದಾಟಿದೆ. 2,767 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.85 ಲಕ್ಷ ಮೀರಿದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಜಿಲ್ಲೆಗಳಲ್ಲಿ ಹೆಚ್ಚಿದ ಸೋಂಕು: ಬೆಂಗಳೂರು ನಗರ 6,387, ಬೀದರ್ 465, ಮೈಸೂರು 362, ಕಲಬುರಗಿ 335, ತುಮಕೂರು 239, ಬೆಂಗಳೂರು ಗ್ರಾಮಾಂತರ 192, ಬಳ್ಳಾರಿ 132, ಚಿಕ್ಕಬಳ್ಳಾಪುರ 120, ವಿಜಯಪುರ 122 ಹಾಸನ 113, ಉಡುಪಿ 101 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ಪರೀಕ್ಷೆಯಲ್ಲಿ ಇಳಿಕೆ: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನಂತೆ ಕೋವಿಡ್ ಪರೀಕ್ಷೆ ಸಂಖ್ಯೆ ಏರಿಸಲಾಗಿದ್ದು, ಭಾನುವಾರ 1.32 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಸೋಮವಾರ ಪರೀಕ್ಷೆ ಸಂಖ್ಯೆ 1.16 ಲಕ್ಷಕ್ಕೆ ಕುಸಿದಿದೆ. ರಾಜ್ಯದಲ್ಲಿ ಈವರೆಗೂ 2.28 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

    ಇದನ್ನೂ ಓದಿ: ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

    82 ಸಾವಿರ ಮಂದಿಗೆ ಲಸಿಕೆ: ರಾಜ್ಯದಲ್ಲಿ ಸೋಮವಾರ 4,981 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಸಿದ್ದು, ಹಿರಿಯ ನಾಗರಿಕರು, 45-60 ವರ್ಷ ವಯೋಮಿತಿಯವರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಸೇರಿದಂತೆ 82,240 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೂ 59.88 ಲಕ್ಷ ಡೋಸ್ ಲಸಿಕೆ ವಿತರಣೆಯಾಗಿದೆ.

    ರಾಜ್ಯದಲ್ಲಿ ಮತ್ತೆ ಲಾಕ್​ಡೌನ್?!; ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದೇನು?​

    ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts