More

    ದ.ಕ. ಪ್ರವೇಶಕ್ಕೆ ಟೆಸ್ಟ್ ಕಡ್ಡಾಯ: ಕಾಸರಗೋಡು ಡಿಸಿಯಿಂದಲೂ ಹೇಳಿಕೆ

    ಮಂಗಳೂರು/ಕಾಸರಗೋಡು: ಕೇರಳ -ಕರ್ನಾಟಕ ಗಡಿ ಭಾಗಗಳಲ್ಲಿ ದ.ಕ ಜಿಲ್ಲಾಡಳಿತ ಸೂಚನೆ ಮೇರೆಗೆ ಪೊಲೀಸರು ಬಿಗಿ ಕ್ರಮ ಅನುಸರಿಸಿರುವುದು ಮುಂದುವರಿದಿದೆ. ತಲಪಾಡಿಯಲ್ಲಿ ಯಥಾಸ್ಥಿತಿಯೇ ಮುಂದುವರಿದಿದ್ದು, 72 ಗಂಟೆಗಳ ಮೊದಲಿನ ನೆಗೆಟಿವ್ ವರದಿ ಇದ್ದವರನ್ನು ಮಾತ್ರವೇ ರಾಜ್ಯದೊಳಕ್ಕೆ ಬಿಡಲಾಗುತ್ತಿದೆ.

    ಕೇರಳದಿಂದ ಕರ್ನಾಟಕಕ್ಕೆ ತೆರಳಲು 72 ತಾಸುಗಳ ಮುಂಚಿತ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ನಡೆಸಿದ ಮಾತುಕತೆ ವೇಳೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಗಂಭೀರ ಸ್ಥಿತಿಯ ರೋಗಿಗಳಲ್ಲದೆ ಉಳಿದವರಿಗೆ ಮಂಗಳೂರಿಗೆ ಚಿಕಿತ್ಸೆ ಸಹಿತ ವಿವಿಧ ವಿಚಾರಗಳಿಗೆ ತೆರಳುವ ವೇಳೆ ಈ ಸರ್ಟಿಫಿಕೆಟ್ ಅಗತ್ಯ ಎಂದವರು ಹೇಳಿದ್ದಾರೆ.

    ಮಂಗಳೂರಿನಲ್ಲಿ ರೈಲು ಮಾರ್ಗದಲ್ಲಿ ಬರುವವರನ್ನೂ ರೈಲು ನಿಲ್ದಾಣದಲ್ಲೇ ತಪಾಸಣೆ ಮಾಡಲಾಗುತ್ತಿದ್ದು, ನೆಗೆಟಿವ್ ವರದಿ ಇಲ್ಲದವರನ್ನು ಪುರಭವನಕ್ಕೆ ತಂದು ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಸೋಮವಾರ 51, ಮಂಗಳವಾರ 203 ಹಾಗೂ ಬುಧವಾರ 33 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಮೊದಲೆರಡು ದಿನಗಳಲ್ಲಿ ಪಾಸಿಟಿವ್ ಕೇಸ್ ಸಿಕ್ಕಿಲ್ಲ. ಮೂರನೇ ದಿನದ ವರದಿ ಈವರೆಗೆ ಸಿಕ್ಕಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    ಇಳಿಕೆಯಾಗದ ಕೋವಿಡ್ ಕೇಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 350 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.4.07ರಲ್ಲಿದೆ. 212 ಮಂದಿಯಲ್ಲಿ ಸೋಂಕು ಗುಣವಾಗಿದೆ. ಜಿಲ್ಲೆಯಲ್ಲಿ ಸದ್ಯ 3092 ಸಕ್ರಿಯ ಪ್ರಕರಣಗಳಿವೆ.

    ಉಡುಪಿ ಜಿಲ್ಲೆಯಲ್ಲಿ ಬುಧವಾರ 140 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 5702 ಮಂದಿಯನ್ನು ಪರೀಕ್ಷಿಸಲಾಗಿದ್ದು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.2.45ರಷ್ಟಿದೆ. ಕಾರ್ಕಳದಲ್ಲಿ 81 ವರ್ಷದ ಮಹಿಳೆ ಹಾಗೂ ಉಡುಪಿಯಲ್ಲಿ 55 ವರ್ಷದ ಪುರುಷ ಮೃತಪಟ್ಟಿದ್ದಾರೆ. 124 ಮಂದಿ ಗುಣವಾಗಿದ್ದು, 1279 ಸಕ್ರಿಯ ಪ್ರಕರಣಗಳಿವೆ.
    ಕಾಸರಗೋಡು ಜಿಲ್ಲೆಯ 934 ಮಂದಿ ಸೇರಿ ಕೇರಳದಲ್ಲಿ ಬುಧವಾರ 22414 ಮಂದಿಗೆ ಕೋವಿಡ್ ಾಧಿಸಿದೆ. 108 ಮಂದಿ ಸಾವಿಗೀಡಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts