More

    ಕರೊನಾ ವೈರಸ್​ ಶ್ರೀಮಂತರ ರೋಗ: ವಿದೇಶದಿಂದ ಹೊತ್ತು ತಂದಿದ್ದಾರೆಂದ ತಮಿಳುನಾಡು ಸಿಎಂ

    ಚೆನ್ನೈ: ಮಹಾಮಾರಿ ಕರೊನಾ ವೈರಸ್​ ಶ್ರೀಮಂತರ ರೋಗ. ಇದನ್ನು ವಿದೇಶಗಳಿಂದ ಶ್ರೀಮಂತರು ಆಮದು ಮಾಡಿಕೊಂಡಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಹೇಳಿದರು.

    ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕರೊನಾ ವೈರಸ್ ಪರಿಸ್ಥಿತಿ ಬಗ್ಗೆ ಗುರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುವಾಗ ಕರೊನಾ ವೈರಸ್​ ಹರಡುವಿಕೆಗೆ ವಿದೇಶದಿಂದ ಬಂದ ಶ್ರೀಮಂತರೇ ಕಾರಣ ಎಂದು ಆರೋಪಿಸಿದರು.

    ಇದೇ ವೇಳೆ ರಾಜ್ಯದಲ್ಲಿ ಕರೊನಾ ಹರಡುವಿಕೆಯನ್ನು ತಡೆಯಲು ಸರ್ಕಾರ ಒಳ್ಳೆಯ ಪ್ರಯತ್ನ ಮಾಡುತ್ತಿದೆ ಎಂದರು. ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ರಾಜ್ಯದಲ್ಲಿ ಶೂನ್ಯ ಕರೊನಾ ಪಾಸಿಟಿವ್​ ಪ್ರಕರಣ ಸಾಧಿಸುವ ಭರವಸೆಯನ್ನು ವ್ಯಕ್ತಪಡಿಸಿದರು.

    ಏಪ್ರಿಲ್​ 14ರಂದು 31 ಪ್ರಕರಣಗಳು ವರದಿಯಾಗಿವೆ. ಬುಧವಾರ ಇದು 38ಕ್ಕೇ ಏರಿಕೆಯಾಯಿತು. ಆದರೆ, ಗುರುವಾರ 25ಕ್ಕೇ ಇಳಿದಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಮತ್ತಷ್ಟು ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಅಳವಡಿಸಿರುವ ಧಾರಕ ವಲಯಗಳೇ ಕಾರಣ ಎಂದರು.

    ತಮಿಳುನಾಡು ಸದ್ಯ ಎರಡನೇ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಪ್ರಕರಣಗಳು ಕಡಿಮೆಯಾಗಲಿದ್ದು, 10 ರಿಂದ 15 ದಿನಗಳ ಒಳಗೆ ಸೋಂಕಿತರೆಲ್ಲರೂ ಗುಣಮುಖರಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕೋವಿಡ್​-19 ಶ್ರೀಮಂತರ ರೋಗ. ವಿದೇಶಗಳಿಂದ ಶ್ರೀಮಂತರೇ ಇದನ್ನು ತವರಿಗೆ ಹೊತ್ತು ತಂದಿದ್ದಾರೆ. ಇದು ಬಡವರಿಗೆ ಸಂಬಂಧಿಸಿದ್ದಲ್ಲ. ಹೀಗಾಗಿ ಇತ್ತೀಚೆಗೆ ಶ್ರೀಮಂತರ ಜತೆ ಮಾತನಾಡಲು ಕೆಲವರು ಹೆದರುತ್ತಿದ್ದಾರೆ. ಕರೊನಾ ತಮಿಳುನಾಡಿನಿಂದ ಸ್ಪೋಟಗೊಂಡಿಲ್ಲ ಎಂಬುದು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದು ಪಳನಿಸ್ವಾಮಿ ಹೇಳಿದರು. (ಏಜೆನ್ಸೀಸ್​)

    ಕರೊನಾ ಪ್ರತ್ಯೇಕ ವಾರ್ಡ್​ನಲ್ಲಿ ವೈದ್ಯನಿಂದ ಮಹಿಳೆ ಮೇಲೆ ಅತ್ಯಾಚಾರ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts