More

    ಕರೊನಾಘಾತ: 4ನೇ ಸ್ಥಾನಕ್ಕೆ ಭಾರತ!

    ನವದೆಹಲಿ: ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಜಾಗತಿಕವಾಗಿ ಅತಿ ಹೆಚ್ಚು ಬಾಧಿತವಾದ ರಾಷ್ಟ್ರಗಳ ಪಟ್ಟಿಯಲ್ಲಿ ಒಂದೇ ದಿನ ಸ್ಪೇನ್ ಮತ್ತು ಬ್ರಿಟನ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ (2.97 ಲಕ್ಷ ಕೇಸ್)ಬಡ್ತಿ ಪಡೆದುಕೊಂಡಿದೆ. ಈ ಅಂಕಿಸಂಖ್ಯೆ ಕೊಂಚ ಆತಂಕ ಮೂಡಿಸಿರುವುದು ನಿಜವಾದರೂ ಭಾರತ ಈಗಷ್ಟೇ ಕರೊನಾ ಪ್ರಕರಣಗಳ ತೀವ್ರಘಟ್ಟ ತಲುಪು ತ್ತಿರುವುದರಿಂದ ಆರೋಗ್ಯ ಇಲಾಖೆ ಮೊದಲೇ ಅಂದಾಜಿಸಿ ದಂತೆ ಜುಲೈ ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಆಶಾಭಾವ ವಿದೆ. ಭಾರತದಲ್ಲಿ ಫೆ.15ರವರೆಗೆ ಮೊದಲ 3 ಪ್ರಕರಣವಷ್ಟೇ ದಾಖಲಾಗಿತ್ತು. ಈ ಸಂಖ್ಯೆ ಮೇ 18ಕ್ಕೆ 1 ಲಕ್ಷದ ಗಡಿ ದಾಟಿತ್ತು. ಬಳಿಕ 15 ದಿನಗಳಲ್ಲೇ ಅಂದರೆ ಜೂ.2ರಂದು ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕೆ ಏರಿಕೆಯಾಗಿತ್ತು. ತದನಂತರ ಕೇವಲ 9 ದಿನಗಳಲ್ಲಿ ಈಗ ಒಟ್ಟು ಪ್ರಕರಣಗಳು 3 ಲಕ್ಷದ ಗಡಿ ದಾಟುವತ್ತ ಹೊರಟಿದೆ.

    ಅದರಲ್ಲೂ ಕೇವಲ 24 ದಿನಗಳ ಅಂತರದಲ್ಲಿ ಭಾರತ ಜಾಗತಿಕ ಪಟ್ಟಿಯಲ್ಲಿ 12 ರಾಷ್ಟ್ರಗಳನ್ನು ಹಿಂದಿಕ್ಕಿ 17ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಿದೆ. ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದ ಬ್ರಿಟನ್, ಸ್ಪೇನ್, ಇಟಲಿ ಹಾಗೂ ಪೆರುವನ್ನು ಕೇವಲ 9 ದಿನಗಳಲ್ಲಿ ದಾಟಿ ಮುಂದೆ ಹೋಗಿದೆ. ದೇಶದಲ್ಲಿ ಮೇ 29ರಿಂದ ಪ್ರತಿದಿನ 8 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದೆ.

    ಸಾವಿನ ಪಟ್ಟಿಯಲ್ಲಿ 11ನೇ ಸ್ಥಾನ: ಜಾಗತಿಕವಾಗಿ ಕರೊನಾ ಸಾವಿನ ಪಟ್ಟಿಯಲ್ಲಿ ಭಾರತ ಸದ್ಯ 11ನೇ ಸ್ಥಾನದಲ್ಲಿದೆ. ಗುರುವಾರ 365 ಹೊಸ ಸಾವುಗಳು ವರದಿಯಾಗುವುದರೊಂದಿಗೆ ಮೃತರ ಸಂಖ್ಯೆ 8,473ಕ್ಕೆ ಏರಿಕೆಯಾಗಿದೆ. ಪ್ರತಿದಿನ ಸಾವನ್ನಪ್ಪುತ್ತಿರುವವರ ಸಂಖ್ಯೆ ತಕ್ಷಣಕ್ಕೆ ನಿಯಂತ್ರಣಕ್ಕೆ ಬರದೇ ಹೋದಲ್ಲಿ ಭಾರತ ಇನ್ನು ಎರಡ್ಮೂರು ದಿನಗಳಲ್ಲಿ ಇರಾನ್ ಮತ್ತು ಜರ್ಮನಿಯನ್ನೂ ಹಿಂದಿಕ್ಕಿ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಲಿದೆ. ಇದೇ ವೇಳೆ ಗುರುವಾರ 9,846 ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿನ ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ.

    ದೇಶದಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ತಲುಪಿತಾ? ಬರೀ ಇಷ್ಟೇ ಅಲ್ಲ ಎಂದಿದ್ದೇಕೆ ಕೇಂದ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts