More

    ‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್​ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರಕ್ಕೆ ಇಂದು ಒಂದು ವರ್ಷ ತುಂಬಿದೆ. ಪ್ರತಿಪಕ್ಷಗಳ ನಾಯಕರು ಮೋದಿ ಸಾಧನೆಯೇನು ಎಂದು ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದರೆ, ಬಿಜೆಪಿ ಮುಖಂಡರು, ತಮ್ಮ ಸರ್ಕಾರ, ಅದನ್ನು ಮುನ್ನಡೆಸುತ್ತಿರುವ ಮಹಾನ್ ನಾಯಕ ನರೇಂದ್ರ ಮೋದಿಯವರನ್ನು ಹೊಗಳುತ್ತಿದ್ದಾರೆ.

    ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳನ್ನು, ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

    ಇದನ್ನೂ ಓದಿ:ಇನ್ಮುಂದೆ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್​ ಮಸಾಲ ಸೇವನೆ, ಉಗಿಯುವುದು ನಿಷೇಧ… 

    ಕೊವಿಡ್​-19 ಬಗ್ಗೆ ಮಾತನಾಡಿದ ಅವರು, ಕರೊನಾ ತಂದೊಡ್ಡಿರುವ ಈ ಸಂಕಷ್ಟ ದೊಡ್ಡ ಸವಾಲು. ಅದರಲ್ಲೂ ನಮ್ಮ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಇಂಥ ದೊಡ್ಡ ಚಾಲೆಂಜ್​​ನ್ನು ಎದುರಿಸಿರಲಿಲ್ಲ. ಆದರೆ ಖುಷಿಯ ಸಂಗತಿ ಎಂದರೆ, ಇಂಥ ಸವಾಲನ್ನೂ ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯವುಳ್ಳ ನಾಯಕ ನಮ್ಮ ದೇಶಕ್ಕೆ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದ್ದಾರೆ.

    ಕರೊನಾ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಯೋಚಿತ ನಿರ್ಧಾರಗಳು, ಒಳ್ಳೆಯ ಚಿಂತನೆಗಳಿಂದಾಗಿ ನಾವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪುದು ತಪ್ಪಿದೆ. ಅದಿಲ್ಲದಿದ್ದರೆ ನಾವೂ ಸಹ ಕೊವಿಡ್​-19 ವಿರುದ್ಧದ ಹೋರಾಟದಲ್ಲಿ ಸೋಲುತ್ತಿದ್ದೆವು. ಈಗ ಅಮೆರಿಕದಲ್ಲಿ ಪರಿಸ್ಥಿತಿ ಹೇಗಿದೆ ನೋಡಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: VIDEO| ಆ್ಯಂಕರ್​ ಅನುಶ್ರೀ ಜೀವನ ಬದಲಾಯ್ತು!; ಪಟ ಪಟ ಮಾತಾಡೋ ಹುಡುಗಿ ಭಾವುಕರಾಗಿದ್ದಾರೆ? 

    ಕರೊನಾ ನಿಯಂತ್ರಣಕ್ಕೆ ಸರ್ಕಾರ್ ಲಾಕ್​ಡೌನ್​ ನಿರ್ಧಾರವನ್ನು ತೆಗೆದುಕೊಂಡಿದ್ದು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜನಾಥ್​ ಸಿಂಗ್​, ಲಾಕ್​ಡೌನ್​ ವಿಫಲವಾಗಿಲ್ಲ. ಇದೊಂದು ಧೈರ್ಯದ ನಿರ್ಧಾರ. ಸರಿಯಾದ ಸಮಯದಲ್ಲಿ ದೇಶವನ್ನು ಲಾಕ್​ಡೌನ್ ಮಾಡದಿದ್ದರೆ ಕರೊನಾ ಇನ್ನೂ ಹೆಚ್ಚು ಬಾಧಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇನ್ನು ರಕ್ಷಣಾ ಸಚಿವಾಲಯದ ಒಂದು ವರ್ಷದ ಸಾಧನೆ ಬಗ್ಗೆ ಮಾತನಾಡಿದ ಅವರು, ರಕ್ಷಣಾಪಡೆ ಸಿಬ್ಬಂದಿ ಮುಖ್ಯಸ್ಥ (ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌- ಸಿಡಿಎಸ್‌)ನ ಹುದ್ದೆ ಸೃಷ್ಟಿಸಲಾಗಿದೆ. ಮೂರು ಪಡೆಗಳಿಗೆ ಓರ್ವ ಮುಖ್ಯಸ್ಥನನ್ನು ನೇಮಕ ಮಾಡುವ ಮೂಲಕ ಮಿಲಿಟರಿ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಮಾಡಲಾಗಿದೆ. ಈ ಮೂಲಕ ವಾಯು, ಭೂ ಮತ್ತು ನೌಕಾ ಪಡೆಗಳ ನಡುವಿನ ಸಹಕಾರ ಹೆಚ್ಚಿಸಲಾಗಿದೆ. ಇದು ನಮ್ಮ ಸರ್ಕಾರದ ಸಾಧನೆ ಎಂದಿದ್ದಾರೆ. ಹಾಗೇ, ಅತ್ಯುತ್ತಮ, ಆಧುನಿಕ ಮಿಲಿಟರಿ ಸಾಧನ, ಸಲಕರಣೆಗಳನ್ನೂ ಸರ್ಕಾರ ಆಮದು ಮಾಡಿಕೊಂಡಿದೆ ಎಂದು ತಿಳಿಸಿದರು.

    ಕಳೆದ ಸ್ವಾತಂತ್ರ್ಯೋತ್ಸವದಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಸಿಡಿಎಸ್​ ಹುದ್ದೆ ಸೃಷ್ಟಿಸುವ ಬಗ್ಗೆ ಮಾತನಾಡಿದ್ದರು. ಹಾಗೇ, ಡಿಸೆಂಬರ್​ನಲ್ಲೇ ಅದು ಕಾರ್ಯರೂಪಕ್ಕೆ ಬಂದು, ಮೊದಲ ಸಿಡಿಎಸ್​ ಆಗಿ ನೇಮಕಗೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts