More

    ಯಥಾ ಸ್ಥಿತಿ ಕಾಪಾಡಲು ಕೋರ್ಟ್ ಆದೇಶ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ವಿವಾದ ದೇವನಹಳ್ಳಿಯ ನ್ಯಾಯಾಲಯದಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಇದರಿಂದ ತಾತ್ಕಾಲಿಕವಾಗಿ ರೋಟರಿ ಶಾಲಾ ಮಕ್ಕಳು ಹಾಗೂ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
    ಈ ಹಿಂದಿನಿಂದ ರೋಟರಿ ಶಾಲಾ ಮಕ್ಕಳು ಆಟವಾಡುತ್ತಿದ್ದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳು ಜ.16ರಂದು ತಡೆಗೋಡೆಯ ಕಲ್ಲುಗಳನ್ನು ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.
    ಶನಿವಾರ ರೋಟರಿ ಸಂಸ್ಥೆಯ ಪರ ನ್ಯಾಯಾಧೀಶರಾದ ಮೋಹನ್ ಕುಮಾರ್ ಅವರು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದ ನಂತರ ೆ.3ರ ವರೆಗೆ ರೋಟರಿ ಸಂಸ್ಥೆಯ ಆವರಣದಲ್ಲಿ ಪುರಸಭೆಯವರು ಹಾಗೂ ಮತ್ಯಾರೂ ಯಾವುದೇ ನಿರ್ಮಾಣ ಕಾರ್ಯದಲ್ಲಿ ತೊಡಗದೆೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶವಾಗಿದೆ ಎಂದು ರೋಟರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.
    4-5 ದಿನಗಳಿಂದಲೂ ಪುರಸಭೆಯವರು ಗಣರಾಜ್ಯೋತ್ಸವದ ರಜಾ ದಿನವನ್ನು ಹಾಗೂ ಕೊನೆ ಶನಿವಾರ ಹಾಗೂ ಭಾನುವಾರ ರಜಾ ದಿನವನ್ನು ಬಳಸಿಕೊಂಡು, ರೋಟರಿ ಶಾಲಾ ಆವರಣದಲ್ಲಿನ ಕಾಂಪೌಂಡ್ ಅನ್ನು ಪೊಲೀಸರ ರಕ್ಷಣೆಯೊಂದಿಗೆ ಕೆಡವಿದ್ದು, ಇಂದಿರಾ ಕ್ಯಾಂಟೀನ್ ನಿರ್ಮಿಸುವ ಅತ್ಯುತ್ಸಾಹದಿಂದ ರೋಟರಿ ಸಂಸ್ಥೆಯನ್ನು ದಮನಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
    ರೋಟರಿ ಸಂಸ್ಥೆಯವರು ಈಗಾಗಲೆ ಹಲವು ಅರ್ಜಿಗಳನ್ನು ಮಾಹಿತಿ ಕೋರಿ ಪುರಸಭೆಗೆ ನೀಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಯೂ ಅರ್ಜಿಗಳನ್ನು ನೀಡಿ, ಇಂದಿರಾ ಕ್ಯಾಂಟೀನ್‌ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಗಿರುವ ನಿರ್ಣಯದ ಪ್ರತಿ ಕೇಳಿದ್ದರು. ಇದರೊಂದಿಗೆ ಹಾಗೂ ಇನ್ನಿತರ ದಾಖಲೆ ನೀಡಿ ಎಂದು ತಿಳಿಸಿದ್ದರೂ ಯಾವುದೇ ದಾಖಲೆ ನೀಡದೆ, ವಿಷಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂದ ಹೋದ ಸಮನ್ಸನ್ನು ಕೂಡ ತೆಗೆದುಕೊಳ್ಳದೆ, ಏಕಾಏಕಿ ಕಲ್ಲಿನ ಕಾಂಪೌಂಡ್ ಗೋಡೆಗಳನ್ನು ಕೆಡವಿ ದಮನ ಕಾರ್ಯ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts