More

    ವಿಮಾನದಲ್ಲಿ ಬಾಲಿವುಡ್​ ಮಾಜಿ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಮುಂಬೈ ವ್ಯಕ್ತಿಯನ್ನು ದೋಷಿಯೆಂದು ಪರಿಗಣಿಸಿದ ನ್ಯಾಯಾಲಯ

    ನವದೆಹಲಿ: ದೇಶಿ ವಿಮಾನದಲ್ಲಿ ಬಾಲಿವುಡ್​ ಮಾಜಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮುಂಬೈ ಮೂಲದ 41 ವರ್ಷದ ಆರೋಪಿಯನ್ನು ವಿಶೇಷ ನ್ಯಾಯಾಲಯ ಬುಧವಾರ ದೋಷಿ ಎಂದು ನಿರ್ಣಯಿಸಿದೆ.

    ಆರೋಪಿ ವಿಕಾಸ್​ ಸಚ್​ದೇವನನ್ನು ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿದೆ. 2017ರ ಡಿಸೆಂಬರ್​ನಲ್ಲಿ ಘಟನೆ ನಡೆದಿತ್ತು. ಘಟನೆಯ ದಿನ ಬಾಲಿವುಡ್​ ಮಾಜಿ ನಟಿ ಅಪ್ರಾಪ್ತೆಯಾಗಿದ್ದರಿಂದ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಅಡಿ ಪ್ರಕರಣ ದಾಖಲಾಗಿತ್ತು.

    ಇದಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಸನ್​ 354(ಮಹಿಳೆಯ ಸ್ವಭಾವನ್ನು ಕೆಡಿಸುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್​ ಬಲ ಪ್ರಯೋಗಿಸುವುದು) ಅಡಿಯಲ್ಲೂ ಪ್ರಕರಣ ದಾಖಲಾಗಿತ್ತು.

    ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಜಡ್ಜ್​ ಎ.ಡಿ. ಡಿಯೋ ಅವರು ಅಪರಾಧಿ ಎಂದು ನಿರ್ಣಯಿಸಿದ್ದು, ಇಂದು ಸಂಜೆಯೊಳಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

    2017ರ ಡಿಸೆಂಬರ್​ನಲ್ಲಿ ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್​ ವಿಸ್ತಾರ್​ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದಾಗಿ ಬಾಲಿವುಡ್​ ಮಾಜಿ ನಟಿ, ಕಣ್ಣೀರು ಹಾಕಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ ಈ ಸಂಬಂಧ ಪ್ರಕರಣವು ದಾಖಲಾಗಿತ್ತು.

    ಪ್ರಕರಣ ಸಂಬಂಧ ಒಟ್ಟು 7 ಸಾಕ್ಷಿಗಳಲ್ಲಿ ಓರ್ವ ಪ್ರಯಾಣಿಕ ಮತ್ತು ಇಬ್ಬರು ವಿಮಾನ ಸಿಬ್ಬಂದಿ ಸಚ್​ದೇವ್​ ಪ್ರಯಾಣ ಪೂರ್ತಿ ನಿದ್ರೆಗೆ ಜಾರಿದ್ದರು ಎಂದು ನ್ಯಾಯಾಲಯದ ಮುಂದೆ ಸಾಕ್ಷಿ ಹೇಳಿದ್ದರು. ಆದರೆ, ಹೆಚ್ಚಿನವರು ಸಚ್​ದೇವ್​ ವಿರುದ್ಧ ಹೇಳಿದ್ದರಿಂದ ಅವರನ್ನು ದೋಷಿ ಎಂದು ನಿರ್ಣಯಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts