More

    ದೇಶದ ಪ್ರಗತಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರ: ಕಾರ್ಮಿಕ ದಿನ ಆಚರಣೆ

    ಮಾನ್ವಿ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದ್ದು, ಅವರ ತ್ಯಾಗ ಪರಿಶ್ರಮದಿಂದ ನಾವೆಲ್ಲರೂ ಅನುಕೂಲಕರವಾಗಿರಲು ಸಾಧ್ಯವಾಗಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ ಹೇಳಿದರು.


    ಪಟ್ಟಣದ ಪಂಪಾ ಉದ್ಯಾನವನದಲ್ಲಿ ಸೋಮವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಕಾರ್ಯಕ್ರಮದಲ್ಲಿ ಕಾರ್ಮಿಕರ ಪ್ರಣಾಳಿಕೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

    ಇದನ್ನೂ ಓದಿ: ಕಾರ್ಮಿಕರು ಇರದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ

    ಅಮೆರಿಕಾದಲ್ಲಿನ ಹೋರಾಟದಲ್ಲಿ ಕಾರ್ಮಿಕರ ಬಲಿದಾನವಾದ ದಿನ

    ಕಟ್ಟಡ ಕೆಲಸದಿಂದ ಹಿಡಿದು ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಶ್ರಮಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಮೆರಿಕಾದಲ್ಲಿನ ಕಾರ್ಮಿಕ ಹೋರಾಟದಲ್ಲಿ ನೂರಾರು ಕಾರ್ಮಿಕರ ಬಲಿದಾನವಾದ್ದರಿಂದ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವೆಂದು ಘೋಷಣೆ ಮಾಡಲಾಯಿತು ಎಂದು ತಿಳಿಸಿದರು.


    ಸಿಐಟಿಯು ತಾಲೂಕು ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯ, ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷ ರುದ್ರಪ್ಪ ನಾಯಕ, ಕಾರ್ಯದರ್ಶಿ ಆಂಜನೇಯ ಕೋಟೆ, ಆಂಜನೇಯ, ಎಂ.ಡಿ. ರಫೀ, ವೆಂಕಟೇಶ, ರಾಮಣ್ಣ, ವೆಂಕೋಬ, ಮಸ್ತಾನ್, ಶಾಂತಕುಮಾರ, ರೆಹಮಾನ್, ರಮೇಶ, ಮಹಮ್ಮದ್ ನೀರಮಾನ್ವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts