More

    ದೇಶದ ಅಭಿವೃದ್ಧಿಗೆ ಎನ್‌ಇಪಿ ಪೂರಕ

    ಬೆಳಗಾವಿ: ಶಿಕ್ಷಣವು ವ್ಯಕ್ತಿಮುಖವಾಗದೆ ರಾಷ್ಟ್ರಮುಖಿ ದ್ಯೋತಕವಾಗಿದೆ. ಈ ತತ್ತ್ವ ಬಲದ ಮೇಲೆ 100 ವರ್ಷಗಳ ಹಿಂದೆ ಏಳು ಶಿಕ್ಷಕರಿಂದ ಕೆಎಲ್‌ಇ ಸಂಸ್ಥೆ ಸ್ಥಾಪನೆಯಾಯಿತು. ನಾವು ಆ ಜವಾಬ್ದಾರಿಯ ಬೆಳಕನ್ನು ಕೊಂಡೊಯ್ಯಬೇಕಾಗಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಬೆಂಗಳೂರಿನ ಶೈಕ್ಷಣಿಕ ಹಾಗೂ ಸಾಮಾಜಿಕ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ (ಎನ್‌ಇಪಿ) ವಿಷಯ ಕುರಿತ ರಾಷ್ಟ್ರಮಟ್ಟದ ವೆಬಿನಾರ್ ಉದ್ದೇಶಿಸಿ ಅವರು ಮಾತನಾಡಿದರು.

    100 ವರ್ಷಗಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನ, ಉದ್ಯೋಗಗಳಲ್ಲಿ ಗಮನಾರ್ಹ ಬದಲಾವಣೆ ಗಳಾಗಿವೆ. ಹೊಸ ವೃತ್ತಿಗಳು, ಹೊಸ ಜವಾಬ್ದಾರಿಗಳು ಹೊರಹೊಮ್ಮಿವೆ. ಸಮಾಜ ಬದಲಾದಂತೆ ಜನರ ಆಕಾಂಕ್ಷೆಗಳು ಬದಲಾಗಿವೆ. ಆದ್ದರಿಂದ ನಾವು ವಿದ್ಯಾರ್ಥಿಗಳಿಗೆ ವಿಭಿನ್ನ ಹಾಗೂ ಪ್ರಸ್ತುತ ಅಗತ್ಯ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ ಎಂದರು.
    ಅಭಿವೃದ್ಧಿ ಕಾಣಲಿದೆ: ಎನ್‌ಇಪಿಯು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಶೇ.100 ದಾಖಲಾತಿ ಹೊಂದುವುದು ಹಾಗೂ ಉನ್ನತ ಶಿಕ್ಷಣದಲ್ಲಿ 2025ರ ವೇಳೆಗೆ ದಾಖಲಾತಿ ಅನುಪಾತವನ್ನು ಶೇ.50ಕ್ಕೆ ಏರಿಸಬೇಕೆಂಬ ಗುರಿ ಹೊಂದಿದೆ. ಶಾಲೆಯಿಂದ ಹೊರಗುಳಿದಿರುವ 2 ಕೋಟಿ ಮಕ್ಕಳನ್ನು ಮರಳಿ ಕಲಿಕೆಗೆ ತರುವ ಗುರಿ ಹಾಕಿಕೊಂಡಿದ್ದು, ಶಿಕ್ಷಣದಲ್ಲಿ ಭಾರತ ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

    ಬಹುವಿಷಯಕ್ಕೆ ಆದ್ಯತೆ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಡಾ. ಕೆ.ರಾಮಚಂದ್ರನ ಮಾತನಾಡಿ, ಪ್ರಸ್ತುತ ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಇನ್ನು ಮುಂದೆ ಬಹುವಿಷಯಗಳ ಶಿಕ್ಷಣಕ್ಕೆ ಆದ್ಯತೆ ನೀಡಲಿವೆ. ಹೊಸ ಶಿಕ್ಷಣ ನೀತಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಒತ್ತು ನೀಡುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಇತಿಹಾಸ ಓದಬಹುದು. ಕಲಾವಿಭಾಗದ ವಿದ್ಯಾರ್ಥಿ ಭೌತಶಾಸ್ತ್ರ, ಗಣಿತವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಬಹುದು ಎಂದರು.

    ಹೊಸ ಶಿಕ್ಷಣ ನೀತಿಯಲ್ಲಿ ಪದವಿಪೂರ್ಣ ಮತ್ತು ಪದವಿ ಶಿಕ್ಷಣವು ವೀಲಿನವಾಗಲಿದೆ. ಶಿಕ್ಷಣವು ಮೂರು ಅಥವಾ ನಾಲ್ಕು ರ್ಷದ ಅವಧಿಯದ್ದಾಗಿರುತ್ತದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಧ್ಯದಲ್ಲಿ ಕೋರ್ಸ್ ಬಿಡಲು ಬಯಸುವವರಿಗೆ ಪ್ರವೇಶ ಮತ್ತು ನಿರ್ಗಮನದ ಅವಕಾಶವೂ ಇರುತ್ತದೆ ಎಂದರು.

    ಬೆಂಗಳೂರಿನ ಶೈಕ್ಷಣಿಕ ಹಾಗೂ ಸಾಮಾಜಿಕ ಅಧ್ಯಯನ ಕೇಂದ್ರದ ಉಪ ನಿರ್ದೇಶಕ ಗೌರೀಶ ಜೋಶಿ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯ ಡಾ.ಪ್ರಕಾಶ ಕಡಕೋಳ, ಡಾ.ಸತೀಶ ಪಾಟೀಲ, ಪ್ರಾಚಾರ್ಯ ಡಾ. ಆರ್.ಎಂ. ಪಾಟೀಲ, ಉಪಪ್ರಾಚಾರ್ಯ ಪ್ರೊ. ಎಂ.ಆರ್. ಬನಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಎಂ. ಚನ್ನಪ್ಪಗೋಳ ಅವರು ವೆಬಿನಾರ್ ಸಂಯೋಜಿಸಿದ್ದರು. ಶ್ರದ್ಧಾ ಪಾಟೀಲ ವೆಬಿನಾರ್ ಪರಿಚಯಿಸಿದರು. ದೇಶದ ವಿವಿಧ ಭಾಗಗಳ ಸುಮಾರು 900 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts