More

    ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮ ಪಾತ್ರ ಹಿರಿದು

    ಬೆಳಗಾವಿ : ಮಾಧ್ಯಮ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರಿಂದ ಸಮಾಜ ಹಾಗೂ ರಾಜಕೀಯ ಪಕ್ಷಗಳಲ್ಲಿ ಪ್ರಬುದ್ಧತೆ ಬೆಳೆಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಕಣಬರ್ಗಿ ರಸ್ತೆ ಮಾರ್ಗದಲ್ಲಿರುವ ದೇಸಾಯಿ ಗಾರ್ಡನ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ವರದಿ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ದೊಡ್ಡದಿದೆ ಎಂದರು.

    ಸಾಮಾಜಿ, ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಷ್ಟೇ ಅಲ್ಲದೆ, ಎಲ್ಲ ವಲಯಗಳಲ್ಲೂ ಮಾಧ್ಯಮ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಅನೇಕ ಪದಾಧಿಕಾರಿಗಳು ಇದ್ದರೂ ಮಾಧ್ಯಮ ವಿಭಾಗಕ್ಕಾಗಿಯೇ ರಾಜ್ಯದಲ್ಲಿ 2,000ಕ್ಕೂ ಅಧಿಕ ಪದಾಧಿಕಾರಿಗಳನ್ನು ಮಾಧ್ಯಮಕ್ಕೆ ಜೋಡಿಸಲಾಗಿದೆ. ಪಕ್ಷದ ಹೇಳಿಕೆ, ಜವಾಬ್ದಾರಿ, ಪಕ್ಷದ ಮುಖವಾಣಿಯಾಗಿ ಪದಾಧಿಕಾರಿಗಳು ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ ಎಂದರು.

    ಚುನಾವಣಾ ಸಂದರ್ಭದಲ್ಲಿ ಮಾತ್ರ ಮಾಧ್ಯಮಕ್ಕೆ ಮಹತ್ವ ನೀಡದೆ ಎಲ್ಲ ಸಂದರ್ಭದಲ್ಲಿಯೂ ಪಕ್ಷದ ಧನಾತ್ಮಕ ವಿಚಾರ, ಸರ್ಕಾರದ ಸಾಧನೆ, ಪಕ್ಷದ ಕಾರ್ಯಚಟುವಟಿಕೆಗಳನ್ನು ಮಾಧ್ಯಮಕ್ಕೆ ನೀಡುವ ಮಹತ್ತರ ಕಾರ್ಯ ಮಾಧ್ಯಮ ಸಂಚಾಲಕರ ಮೇಲಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಟೆಂಗಿನಕಾಯಿ ತಿಳಿಸಿದರು.
    ಸಂಕಲ್ಪ ಮಾಡೋಣ: ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಪಕ್ಷದಲ್ಲಿ ಮಾಧ್ಯಮ ವಿಭಾಗ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ.

    ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಜಾಗೃತೆಯಿಂದ ಕೆಲಸ ಮಾಡಲು ಪದಾಧಿಕಾರಿಗಳು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸಹ ಕಾರ್ಯದರ್ಶಿ ಬಸವರಾಜ ಯಕ್ಕಂಚಿ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ವಿಭಾಗ ಮಾಧ್ಯಮದ ಪ್ರಭಾರಿ ಸಿದ್ದು ಮೊಗಲಿಶಟ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ಸುಭಾಷ ಪಾಟೀಲ, ಮುರುೇಂದ್ರ ಪಾಟೀಲ, ಸಂದೀಪ ದೇಶಪಾಂಡೆ, ದಾದಾಗೌಡ ಬಿರಾದಾರ, ಗಿರೀಶ ದೊಂಗಡಿ, ಮಲ್ಲಿಕಾರ್ಜುನ ಮಧಮ್ಮನವರ, ಎಫ್.ಎಸ್. ಸಿದ್ಧನಗೌಡರ, ಶರದ ಪಾಟೀಲ, ಹನುಮಂತ ಕೊಂಗಾಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts