More

    ಬೆಂಗಳೂರಿನಲ್ಲಿ ಸೆ.7ರಿಂದ ಮೂರು ದಿನ ನಡೆಯುವ ವಿಶ್ವ ಕಾಫಿ ಸಮಾವೇಶ, ಎಕ್ಸ್​ಪೋ

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸೆ.7ರಿಂದ ಮೂರು ದಿನ ನಡೆಯುವ ವಿಶ್ವ ಕಾಫಿ ಸಮಾವೇಶ, ಎಕ್ಸ್​ಪೋ ಭಾರತವು ಅಂತಾರಾಷ್ಟ್ರೀಯ ಮಟ್ಟದ ಕಾಫಿ ಉದ್ಯಮಿಗಳು, ಕಾಫಿ ತಂತ್ರಜ್ಞರು, ಕೈಗಾರಿಕೋದ್ಯಮಗಳ ಮುಖ್ಯಸ್ಥರು, ರಫ್ತುದಾರರು, ಪರಿಣತರ ಸಮಾಗಮಕ್ಕೆ ವೇದಿಕೆಯಾಗಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಹೇಳಿದರು.

    ಭಾರತದ ಕಾಫಿಯ ಸ್ವಾದವನ್ನು ವಿಶ್ವಕ್ಕೆ ಪರಿಚಯಿಸಲು ಸಮಾವೇಶ ಅತ್ಯುತ್ತಮ ಅವಕಾಶ ಕಲ್ಪಿಸಲಿದೆ. ಸಮಾವೇಶಕ್ಕೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಅಂತಾರಾಷ್ಟ್ರೀಯ ಕಾಫಿ ಸಂಘಟನೆ ಕೈಜೋಡಿಸಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಕಾಫಿ ಬೆಳೆಯುವ ಹಾಗೂ ಅತಿಹೆಚ್ಚು ಗ್ರಾಹಕರನ್ನು ಪಡೆದಿರುವ ನೂರು ರಾಷ್ಟ್ರಗಳ ಒಂದು ಸಾವಿರ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಭಾರತದ ಎರಡು ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

    ಒಂದು ಲಕ್ಷಕ್ಕೂ ಅಧಿಕ ಕಾಫಿ ಬೆಳೆಗಾರರು, ರಫ್ತುದಾರರು, ಉದ್ಯಮ ಪ್ರಿಯರು, ಕಾಫಿ ಪ್ರಿಯರು ಹಾಗೂ ಹೋಟೆಲ್, ಉಪಾಹಾರ ಗೃಹ ಮತ್ತು ಕೆಫೆಟೇರಿಯಾದಿಂದಲೂ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ವಿಶ್ವದ ಕಾಫಿ ಕೃಷಿಕರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವುದರ ಜತೆಗೆ ಜಾಗತಿಕ ತಾಪಮಾನ, ಏರುತ್ತಿರುವ ಕಾಫಿ ಉತ್ಪಾದನಾ ವೆಚ್ಚ, ಕಾಫಿ ದರ ಕುಸಿತ ಸ್ಥಿತಿಗತಿಗಳ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

    ಬಳಕೆಯೊಂದಿಗೆ ಸುಸ್ಥಿರತೆ ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಕಾಫಿ ಬೆಳೆಯುವ ಪ್ರದೇಶಗಳಿಗೆ ವಿಶ್ವ ದಿಗ್ಗಜರ ಭೇಟಿ ಏರ್ಪಡಿಸಲಾಗಿದ್ದು, ರಾಜ್ಯದ ಕಾಫಿ ಸಂಸ್ಕೃತಿಯನ್ನು ವಿದೇಶಿ ವೀಕ್ಷಕರಿಗೆ ಅನಾವರಣಗೊಳಿಸಲಾಗುವುದು ಎಂದರು.

    ಕಾಫಿ ಮಂಡಳಿ ಖಜಾಂಚಿ ಮಹೇಶ್ ಗೌಡ, ವಿಶ್ವ ಕಾಫಿ ಸಮಾವೇಶದ ಪ್ರಚಾರ ಸಂಯೋಜಕ ಟಿ.ಎಲ್.ಶ್ರೀನಿವಾಸ್, ಕೆಪಿಎ ಕಾರ್ಯದರ್ಶಿ ಡಿ.ಅನಿಲ್ ಸವೂರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts