More

    ನಿರೀಕ್ಷಿತ ಮಟ್ಟದಲ್ಲಿ ಆವಕವಾಗದ ಹತ್ತಿ

    ಗದಗ: ಭಾರತೀಯ ಹತ್ತಿ ನಿಗಮದಿಂದ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಆರಂಭಿಸಿರುವ ಹತ್ತಿ ಖರೀದಿ ಕೇಂದ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಹತ್ತಿ ಆವಕವಾಗುತ್ತಿಲ್ಲ. ಬೆಂಬಲ ಬೆಲೆ ಕೇಂದ್ರ ಆರಂಭಿಸಿರುವ ಕುರಿತು ಪ್ರಚಾರದ ಮೂಲಕ ರೈತರಿಗೆ ಮಾಹಿತಿಯನ್ನೇ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

    ನಗರದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಒಣಮೆಣಸಿನಕಾಯಿ ಮಾರ್ಕೆಟ್ ಹಿಂಭಾಗ ಮಾರ್ಕೆಟಿಂಗ್ ಫೆಡರೇಷನ್ ಗೋದಾಮಿನ ಮುಂಭಾಗದಲ್ಲಿ್ಲ ಹತ್ತಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ, ರೈತರು ಹತ್ತಿ ಮಾರಾಟ ಮಾಡಲು ಬೆಂಬಲ ಬೆಲೆ ಕೇಂದ್ರದ ಕಡೆಗೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 5200 ರೂ. (ಶುಕ್ರವಾರದ ಧಾರಣೆ) ಇದೆ. ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್​ಗೆ 5775 ರೂ. ನಿಗದಿಪಡಿಸಿದರೂ ರೈತರು ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಜಿಲ್ಲೆಯ ಲಕ್ಷೆ್ಮೕಶ್ವರದಲ್ಲಿ (ಬುಧವಾರ) ಮತ್ತು ಗದಗದಲ್ಲಿ (ಗುರುವಾರ) ಬೆಂಬಲಬೆಲೆ ಯೋಜನೆಯಡಿ ಹತ್ತಿ ಖರೀದಿ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಎರಡೂ ಕೇಂದ್ರಗಳಲ್ಲಿ ಆವಕ ಪ್ರಮಾಣ ಕಡಿಮೆ ಇದೆ. ಲಕ್ಷೆ್ಮೕಶ್ವರ ಖರೀದಿ ಕೇಂದ್ರದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮತ್ತು ಗದಗದಲ್ಲಿ ಮಂಗಳವಾರ, ಗುರುವಾರ ಮತ್ತು ಶನಿವಾರ ಹತ್ತಿ ಖರೀದಿ ಮಾಡಲಾಗುತ್ತಿದೆ.

    ಲಕ್ಷೆ್ಮೕಶ್ವರದಲ್ಲಿ ಬುಧವಾರ, ಶುಕ್ರವಾರ ಹತ್ತಿ ಖರೀದಿ ನಡೆದಿದ್ದು. ಕೇವಲ 20 ಟ್ರಾ್ಯಕ್ಟರ್ ಹತ್ತಿ ಮಾತ್ರ (ಪ್ರತಿ ಟ್ರಾ್ಯಕ್ಟರ್​ಗೆ 10ರಿಂದ 15 ಕ್ವಿಂಟಾಲ್ ಹತ್ತಿ) ಖರೀದಿ ಕೇಂದ್ರಕ್ಕೆ ಬಂದಿದೆ. ಗದಗದಲ್ಲಿ ಸಹ ಗುರುವಾರ 12 ಟ್ರಾ್ಯಕ್ಟರ್ ಹತ್ತಿ ಬಂದಿದೆ ಎಂದು ನಿಗಮದ ಅಧಿಕಾರಿಗಳು ವಿವರಿಸಿದರು.

    ರೈತರೇ ಹತ್ತಿ ಮಾರಾಟಕ್ಕೆ ಬನ್ನಿ

    2020-21ನೇ ಸಾಲಿನ ಕೇಂದ್ರ ಸರ್ಕಾರದ ಹತ್ತಿ ಬೆಂಬಲ ಬೆಲೆ ಯೋಜನೆಯಡಿ 29 ಎಂ.ಎಂ. ಗುಣಮಟ್ಟದ ಹತ್ತಿಗೆ ಪ್ರತಿ ಕ್ವಿಂಟಾಲ್​ಗೆ 5775 ರೂ. ದರ ನಿಗದಿಪಡಿಸಲಾಗಿದೆ. ಪಹಣಿಯಲ್ಲಿರುವ ಹೆಸರಿನ ರೈತರೇ ಖುದ್ದಾಗಿ ಹತ್ತಿ ಮಾರಾಟಕ್ಕೆ ಬರಬೇಕು. ಇತ್ತೀಚಿನ ಪಹಣಿ ಉತಾರ, ಐ.ಎಫ್.ಎಸ್.ಸಿ ಕೋಡ್ ಇರುವ ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಬೆಳೆ ದೃಢೀಕರಣ ಪ್ರಮಾಣಪತ್ರ ತರಬೇಕು ಎಂದು ಭಾರತೀಯ ಹತ್ತಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಗದಗ ಜಿಲ್ಲೆಯ ಗದಗ ನಗರ ಮತ್ತು ಲಕ್ಷೆ್ಮೕಶ್ವರ ಪಟ್ಟಣದಲ್ಲಿ ಬೆಂಬಲಬೆಲೆ ಯೋಜನೆಯಡಿ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹತ್ತಿ ಆವಕವಾಗುತ್ತಿಲ್ಲ. ಎರಡು ದಿನಗಳಲ್ಲಿ ಲಕ್ಷೆ್ಮೕಶ್ವರದಲ್ಲಿ 660 ಕ್ವಿಂಟಾಲ್, ಗದಗದಲ್ಲಿ 470 ಕ್ವಿಂಟಾಲ್ ಹತ್ತಿ ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ (ಪ್ರತಿ ಕ್ವಿಂಟಾಲ್ ಗೆ 5400 ರೂ.) ಇರುವುದರ ಜತೆಗೆ ತಕ್ಷಣ ಹಣ ಸಿಗಲಿದೆ ಎಂಬ ಕಾರಣದಿಂದ ರೈತರು ಅಲ್ಲಿಗೆ ತೆರಳುತ್ತಾರೆ. ಖರೀದಿ ಕೇಂದ್ರಕ್ಕೆ ಹತ್ತಿ ಮಾರಾಟ ಮಾಡಿ ಹಣಕ್ಕಾಗಿ ಕಾಯಲು ರೈತರು ತಯಾರಿಲ್ಲ. ಹೀಗಾಗಿ ಅವರು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಆದ್ಯತೆ ನೀಡುತ್ತಾರೆ.

    | ಡಿ. ಶಕ್ತಿವೇಲು, ವಾಣಿಜ್ಯ ಅಧಿಕಾರಿ, ಭಾರತೀಯ ಹತ್ತಿ ನಿಗಮ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts