More

    ಎಲೆಕ್ಟ್ರಾಲ್ ಬಾಂಡ್ ಮೂಲಕ ಭ್ರಷ್ಟಾಚಾರ

    ಚಿಕ್ಕಮಗಳೂರು: ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಮೂಲಕ ಗುತ್ತಿಗೆದಾರರು, ಕಾರ್ಪೋರೇಟ್ ಉದ್ಯಮಿಗಳನ್ನು ಬೆದರಿಸಿ ಅವರಿಂದ ಕೋಟ್ಯಂತರ ರೂ. ಎಲೆಕ್ಟ್ರೋಲ್ ಬಾಂಡ್ ಪಡೆದಿರುವ ಬಿಜೆಪಿ ಭ್ರಷ್ಟಾಚಾರಿಗಳ ಜನತಾ ಪಾರ್ಟಿ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಆರೋಪಿಸಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಚುನಾವಣಾ ಬಾಂಡ್ ಹಗರಣ ಬೆಳಕಿದೆ ಬಂದಿದೆ. ಸುಮಾರು 8,252 ಕೋಟಿ ರೂ. ಎಸ್‌ಬಿಐ ಮೂಲಕ ಗುತ್ತಿಗೆದಾರರಿಂದ, ಭ್ರಷ್ಟ ಕಂಪನಿಗಳು, ಔಷಧ ತಯಾರಿಕಾ ಕಂಪನಿಗಳು, ಬೆಡ್ಡಿಂಗ್ ದಂಧೆ ನಡೆಸುವ ಕಂಪನಿಗಳಿಂದ ಎಲೆಕ್ಟ್ರಾಲ್ ಬಾಂಡ್ ಸಂದಾಯವಾಗಿರುವುದನ್ನು ನೋಡಿದರೆ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
    49ಕಂಪನಿಗಳಿಗೆ 62 ಸಾವಿರ ಕೋಟಿ ರೂ.ಗಳ ಪ್ರಾಜೆಕ್ಟ್ ನೀಡಿ 600 ಕೋಟಿಯನ್ನು ಬಾಂಡ್ ಮೂಲಕ ವಸೂಲಿ ಮಾಡಿದ್ದಾರೆ. 41 ಕಂಪನಿಗಳನ್ನು ಇಡಿ, ಸಿಬಿಐ ಮತ್ತು ಐಟಿ ಮೂಲಕ ರೈಡ್ ಮಾಡಿಸಿ ಬಿಜೆಪಿಗೆ 1,853 ಕೋಟಿ ರೂ.ಸಂದಾಯವಾಗಿದೆ. ಕಳೆದ 6 ವರ್ಷದಿಂದ 38 ಕಾರ್ಪೋರೇಟ್ ಕಂಪನಿಗಳಿಗೆ 4 ಲಕ್ಷ ಕೋಟಿ ರೂ. ಮೊತ್ತದ 179 ಗುತ್ತಿಗೆ ಕೊಟ್ಟು 2 ಸಾವಿರ ಕೋಟಿ ರೂ. ಬಾಂಡ್ ಮೂಲಕ ಕಿಕ್‌ಬ್ಯಾಕ್ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
    ನರೇಂದ್ರ ಮೋದಿಯವರ ಗ್ಯಾರಂಟಿ ಇಲ್ಲದ ಗ್ಯಾರಂಟಿಯನ್ನು ಈ ಬಾರಿ ಜನರು ತಿರಸ್ಕರಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರುತ್ತಾರೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂದಲ್ಲಿ ರೈತರ ಸಾಲ ಮನ್ನಾ, ಯುವಕರಿಗೆ 1 ಲಕ್ಷ ಅಪ್ರೆಂಟಿಸ್, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿಯನ್ನು ಜಿಎಸ್‌ಟಿ ಮುಕ್ತ ಮಾಡುವುದು, ಪ್ರತಿ ಬಡ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ., ಕೇಂದ್ರ ಸರ್ಕಾರಿ ನೌಕರಿಯಲ್ಲಿ ಶೇ. 50ರಷ್ಟು ಮಹಿಳಾ ಮೀಸಲಾತಿ, ಆಶಾ ಅಂಗನವಾಡಿ ಮತ್ತು ಬಿಸಿಯೂಟದ ಕಾರ್ಯಕರ್ತೆಯರಿಗೆ ಡಬಲ್ ವೇತನ, ಪ್ರತಿ ಜಿಲ್ಲೆಗಳಲ್ಲಿ ಕೆಲಸ ಮಾಡುವ ಮಹಿಳೆಗೆ ವಸತಿ ನಿಲಯ ತೆರೆಯಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts