More

    ಕರೊನಾ ಭಯಕ್ಕೆ ಬಲಿಯಾದ ವೃದ್ಧ: ಬಿಸಿಲಿನಿಂದಾಗಿ ಬಿದ್ದರೂ ಎತ್ತದ ಜನ!

    ನವದೆಹಲಿ: ಕರೊನಾ ಸೋಂಕು ಜನರನ್ನು ಎಷ್ಟರಮಟ್ಟಿಗೆ ಆವರಿಸಿಬಿಟ್ಟಿದೆ ಎಂದರೆ ಸ್ವಲ್ಪ ಅನಾರೋಗ್ಯ ಕಾಡಿದರೂ, ಕರೊನಾ ವೈರಸ್ಸೇ ಬಂದುಬಿಟ್ಟಿದೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲೆದೋರಿದೆ.

    ಈ ಆತಂಕದಿಂದಾಗಿಯೇ ವೃದ್ಧನೊಬ್ಬ ಪ್ರಾಣ ಕಳೆದುಕೊಂಡಿರುವ ವಿಷಾದಕರ ಘಟನೆ ದೆಹಲಿಯಲ್ಲಿ ನಡೆದಿದೆ. ಮೂರು ಗಂಟೆ ಬಿದ್ದ ವೃದ್ಧನ ಸಮೀಪ ಬರಲು ಜನರು ಹೆದರಿದ ಕಾರಣದಿಂದ ವೃದ್ಧ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ!

    ಇದನ್ನೂ ಓದಿ: ಎಲ್ಲವೂ ಮೋದಿಗಾಗಿ: 5 ಕಿ.ಮೀ ಆಟೋ ಪ್ರಯಾಣಕ್ಕೆ ಕೇವಲ ಒಂದೇ ರೂಪಾಯಿ!

    ಇದು ನಡೆದಿರುವುದು ದಕ್ಷಿಣ ದೆಹಲಿಯಲ್ಲಿ. ಸುಮಾರು 65ವರ್ಷದ ವ್ಯಕ್ತಿಯೊಬ್ಬರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ಇದಕ್ಕೆ ಕಾರಣ ಬಿಸಿಲಿನ ಝಳ. ಕೆಲವು ದಿನಗಳಲ್ಲಿ ದೆಹಲಿಯಲ್ಲಿ ವಿಪರೀತ ಬಿಸಿಲು ಇರುವ ಕಾರಣ, ಧಗೆಯಿಂದಾಗಿ ವೃದ್ಧ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಆದರೆ ಅವರು ಬಿದ್ದಿರುವುದು ಕರೊನಾ ಸೋಂಕಿನಿಂದಲೇ ಎಂದು ತಿಳಿದುಕೊಂಡ ಜನರು ಅವರನ್ನು ಎತ್ತಲು ಹೋಗಲೇ ಇಲ್ಲ.

    ಮೊದಲಿಗೆ ಈ ವಿಷಯವನ್ನು ಪೊಲೀಸರಿಗಾಗಲೀ, ಅಂಬ್ಯುಲೆನ್ಸ್​ಗಾಗಲಿ ತಿಳಿಸುವ ಗೋಜಿಗೂ ಜನರು ಹೋಗಲಿಲ್ಲ. ಮೂರು ಗಂಟೆ ನಂತರ ವಿಷಯ ಪೊಲೀಸರಿಗೆ ತಲುಪಿ ಅವರು ಪಿಪಿಇ ಕಿಟ್​ ರಕ್ಷಣಾ ಕವಚ ಧರಿಸಿ ವೃದ್ಧನನ್ನು ಆಂಬ್ಯುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು!

    ಇದನ್ನೂ ಓದಿ: ಚಂಡಮಾರುತದ ಪರಿಹಾರ ಕಾರ್ಯದಲ್ಲಿ ಬಂತು ವಿಸ್ಕಿ ಬಾಟಲ್, ಸ್ನ್ಯಾಕ್ಸ್​​​: ಜನರು ತಬ್ಬಿಬ್ಬು!‘

    ಮೃತರನ್ನು ಯೂಸೂಫ್ ಸರಾಯ್ ಎಂದು ಗುರುತಿಸಲಾಗಿದೆ. ಇವರು ಏಮ್ಸ್ ಆಸ್ಪತ್ರೆಯ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು, ನಂತರ ನಿವೃತ್ತಿ ಹೊಂದಿದ್ದರು ಎಂದು ತಿಳಿದುಬಂದಿದೆ. ಅವರು ಬಿದ್ದಿರುವುದಕ್ಕೆ ಕಾರಣ ಬಿಸಿಲೇ ಹೊರತು ಕರೊನಾ ಸೋಂಕು ಅಲ್ಲ ಎಂದು ನಂತರದಲ್ಲಿ ಗೊತ್ತಾಗಿದೆ. ಆದರೆ ಸೋಂಕಿನ ಭಯದಿಂದಾಗಿ ಒಂದು ಪ್ರಾಣ ಹೊರಟುಹೋಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts