More

    ಕೊರೊನಾ ವೈರಸ್​ ಭೀತಿ: ಚೀನಾದಿಂದ 324 ಭಾರತೀಯರನ್ನು ಹೊತ್ತು ತಂದ ಏರ್​ ಇಂಡಿಯಾ ವಿಮಾನ

    ನವದೆಹಲಿ: ಚೀನಾದ್ಯಂತ ಕೊರೊನಾ ವೈರಸ್​ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಏರ್​ ಇಂಡಿಯಾ ಬೋಯಿಂಗ್​ 747 ವಿಮಾನವು ಚೀನಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷತಾ ದೃಷ್ಠಿಯಿಂದ ಕರೆತಂದಿದೆ.

    ಮಾರಾಣಾಂತಿಕ ಕೊರೊನಾ ವೈರಸ್​ ಈಗಾಗಲೇ 200ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚೀನಾದಿಂದ 324 ಭಾರತೀಯರನ್ನು ಶನಿವಾರ ಬೆಳಗ್ಗೆ ಸ್ವದೇಶಕ್ಕೆ ಕರೆತರಲಾಗಿದೆ. ಗುರುವಾರ ವಿಮಾನವು ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯ ಐವರು ವೈದ್ಯರೊಂದಿಗೆ ಚೀನಾಗೆ ತೆರಳಿತ್ತು.

    ಸೋಂಕಿತ ಪ್ರಯಾಣಿಕರಿಂದ ವಿಮಾನ ಸಿಬ್ಬಂದಿ, ಪೈಲಟ್​ಗಳು ಮತ್ತು ಸಹ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ತೀವ್ರ ತಪಾಸಣೆ ನಡೆಸಿ ಕರೆತರಲಾಗಿದೆ. ಅಲ್ಲದೆ, ಇಂದು ಮತ್ತೊಂದು ವಿಮಾನ ಚೀನಾಗೆ ಹಾರಲಿದೆ.

    ಚೀನಾದ ವುಹಾನ್​ನಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ವಿಶೇಷ ವಿಮಾನದಲ್ಲಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟ ಚೀನಾ ಸರ್ಕಾರಕ್ಕೆ ಭಾರತ ಸರ್ಕಾರ ಟ್ವೀಟ್​ ಮೂಲಕ ಧನ್ಯವಾದಗಳನ್ನು ತಿಳಿಸಿದೆ.

    ಕೊರೊನಾ ವೈರಸ್​ ಹೆಚ್ಚಾಗಿ ದಾಳಿ ಮಾಡಿರುವ ಹುಬೇ ಪ್ರಾಂತ್ಯದಲ್ಲಿದ್ದ 324 ಭಾರತೀಯರನ್ನು ಹೊತ್ತ ಭಾರತದ ವಿಮಾನ ಇಂದು ಮುಂಜಾನೆಯೇ ವುಹಾನ್​ನಿಂದ ಹೊರಟು ಭಾರತವನ್ನು ತಲುಪಿದೆ. ಪ್ರಯಾಣಿಕರಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳೇ ಆಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts