More

    ರಾಜ್ಯದಲ್ಲಿಂದು ಕರೊನಾ ಸ್ಪೋಟ: 19 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, ದಾಖಲೆ ಬರೆದ ಬೆಂಗಳೂರು

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್​ ಆರ್ಭಟ ಮುಂದುವರಿದಿದೆ. ಕಳೆದ 24ಗಂಟೆಯಲ್ಲಿ 1694 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 994 ಮಂದಿಯಲ್ಲಿ ಕೊವಿಡ್​-19 ದೃಢಪಡುವ ಮೂಲಕ ರಾಜಧಾನಿ ಕರೊನಾ ಹಾಟ್​ಸ್ಪಾಟ್​ ಆಗಿದೆ.

    ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 21 ಮಂದಿ ಸಾವನ್ನಪ್ಪಿದ್ದು, 471 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

    ಇದನ್ನೂ ಓದಿ: ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಹೈರಾಣದ ನಿವೃತ್ತ ಎಸ್ಐ ಸಾವು

    ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 19,710ಕ್ಕೆ ಏರಿದ್ದು, ಡಿಸ್​ಚಾರ್ಜ್​ ಆದವರು ಒಟ್ಟು 8805 ಜನರು. ಮೃತಪಟ್ಟವರು 293 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 10608 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ರಾಜ್ಯದಲ್ಲಿಂದು ಕರೊನಾ ಸ್ಪೋಟ: 19 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, ದಾಖಲೆ ಬರೆದ ಬೆಂಗಳೂರು ರಾಜ್ಯದಲ್ಲಿಂದು ಕರೊನಾ ಸ್ಪೋಟ: 19 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, ದಾಖಲೆ ಬರೆದ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts