More

    ವಿಶ್ವ ಶ್ರೀಮಂತರ ಮೇಲೆ ಕೊರೊನಾ ವೈರಸ್​ ಕೆಂಗಣ್ಣು: ಕರಗಿದ ಆದಾಯ, ಜೆಫ್​ ಬೆಜೋಸ್​, ಬಿಲ್​ ಗೇಟ್ಸ್​ ಮೇಲೆ ಹೆಚ್ಚು ಪ್ರಭಾವ

    ನವದೆಹಲಿ: ಜಾಗತಿಕ ಆರ್ಥಿಕತೆ ಮೇಲೆ ಕರಿನೆರಳು ಬೀರಿರುವ ಮಾರಕ ಕೊರೊನಾ ವೈರಸ್, ಇತ್ತೀಚಿನ ದಿನಗಳಲ್ಲಿ ಜಾಗತಿಕ ಷೇರುಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿರುವುದರಿಂದ ವಿಶ್ವದ ಶ್ರೀಮಂತ ವ್ಯಕ್ತಿಗಳ ಆದಾಯವನ್ನು ಹೀರಿ ಕೊಂಡಿದೆ. ​

    ಒಟ್ಟಾರೆ ವಿಶ್ವದ 500 ಶ್ರೀಮಂತ ವ್ಯಕ್ತಿಗಳ ನಿವ್ವಳ ಮೌಲ್ಯ 44,400 ಕೋಟಿ​ ಡಾಲರ್ (32,04,570 ಕೋಟಿ ರೂಪಾಯಿ) ​ನಷ್ಟು​ ಕುಸಿದಿದೆ. ಅದರಲ್ಲೂ ಜಾಗತಿಕ ಮಟ್ಟದ ಮೂವರು ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಅಮೆಜಾನ್​ ಸಿಇಒ ಜೆಫ್​ ಬೆಜೋಸ್​, ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್​ ಮತ್ತು ಫ್ರಂಚ್ ಬಿಲಿಯನೇರ್​ ಬರ್ನಾರ್ಡ್​ ಅರ್ನಾಲ್ಟ್ ಉಳಿದವರಿಗಿಂತ​ ಹೆಚ್ಚಿನ ಆದಾಯವನ್ನು ಕಳೆದುಕೊಂಡಿದ್ದಾರೆ. ಮೂವರು ಒಟ್ಟು ನಿವ್ವಳ ಮೌಲ್ಯ 30 ಬಿಲಿಯನ್​ ಡಾಲರ್​ ಕುಸಿದಿದೆ.​

    ಕೊರೊನಾ ವೈರಸ್​ ಬಗ್ಗೆ ಶುಕ್ರವಾರವಷ್ಟೇ ನ್ಯೂ ಇಂಗ್ಲೆಂಡ್​ ಜರ್ನಲ್ ಆಫ್​ ಮೆಡಿಸಿನ್​ಗೆ ಬಿಲ್ ​ಗೇಟ್ಸ್​ ಪತ್ರವೊಂದನ್ನು ಬರೆದು ಎಚ್ಚರಿಸಿದ್ದರು. ಈ ಮಾರಕ ಸೋಂಕು 1957ರಲ್ಲಿ ಸಾಕಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಸಾಂಕ್ರಮಿಕ ರೋಗವನ್ನು ಮೀರಿಸುವ ಸಂಭವವಿದೆ ಎಂದಿದ್ದಾರೆ. 1957ರಲ್ಲಿ ಸುಮಾರು 20 ಲಕ್ಷ ಮಂದಿ ಜಗತ್ತಿನಾದ್ಯಂತ ಸಾಂಕ್ರಮಿಕ ರೋಗದಿಂದ ಸಾವಿಗೀಡಾಗಿದ್ದರು. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಏಷಿಯನ್​ ಫ್ಲ್ಯೂ ಎಂದು ಹೆಸರಿಟ್ಟಿತ್ತು.

    25ನೇ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್​​ ಮಸ್ಕ್ ಅವರು ನಾಲ್ಕನೇ ಅತ್ಯಧಿಕ ನಷ್ಟವನ್ನು ಹೊಂದಿದ್ದು, 9 ಬಿಲಿಯನ್​ ಡಾಲರ್​ ನಿವ್ವಳ ಮೌಲ್ಯ ಕುಸಿದಿದೆ. ಅಂದಹಾಗೆ ಮಸ್ಕ್ಎಲೆಕ್ಟ್ರಿಕ್​ ಕಾರು ಕಂಪನಿಯ “ತೆಸ್ಲಾ”ದ ಸಿಇಒ.

    ಕಳೆದ ಐದು ದಿನಗಳಲ್ಲೇ 30 ಬೃಹತ್​ ಕಂಪನಿಗಳ ಷೇರು, ಡಾವ್​​ ಜಾನ್ಸ್​ ಇಂಡಸ್ಟ್ರಿಯಲ್​ ಅವರೇಜ್​ ಸೂಚ್ಯಂಕ ಪಟ್ಟಿಯ ಪ್ರಕಾರ ಶೇ 12ಕ್ಕಿಂತ ಹೆಚ್ಚು ಕುಸಿದಿದೆ. ಇದು 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಕಂಡುಬಂದ ಅತ್ಯಂತ ಹೆಚ್ಚು ಕುಸಿತ ಎನ್ನಲಾಗಿದೆ. ವರ್ಷದ ಆರಂಭದಿಂದ ವಿಶ್ವದ 500 ಶ್ರೀಮಂತರು ಸುಮಾರು 78 ಬಿಲಿಯನ್​ ಡಾಲರ್​ ಆದಾಯವನ್ನು ತಮ್ಮ ಖಜಾನೆಗೆ ಸೇರಿಸಿಕೊಂಡಿದ್ದರು. ಅಷ್ಟೂ ಆದಾಯ ಕೇವಲ ಐದೇ ದಿನದಲ್ಲಿ ಅಳಿಸಿ ಹೋಗಿದೆ.

    ಬೆರ್ಕ್​ಶೈರ್​ ಹ್ಯಾಥ್​ವೇ ಸಿಇಒ ವ್ಯಾರೆನ್​ ಬಫೆಟ್​ ನಿವ್ವಳ ಮೌಲ್ಯ 8 ಬಿಲಿಯನ್​ ಡಾಲರ್​ ಕುಸಿದರೆ,. ಸ್ಪ್ಯಾನೀಶ್​ ಬಿಲಿಯನೇರ್​ ಅಮ್ಯಾನ್ಶಿಯೋ ಒರ್ಟೇಗಾ ನಿವ್ವಳ ಮೌಲ್ಯ 6.8 ಬಿಲಿಯನ್​ ಡಾಲರ್​ ಕುಗ್ಗಿದೆ. ಫೇಸ್​ಬುಕ್​ ಸಿಇಒ ಮಾರ್ಕ್​ ಜುಕರ್​ಬರ್ಗ್ ಹಾಗೂ ಸಹ ಪಾಲುದಾರ ಸರ್ಗೆ ಬ್ರಿನ್​ ನಿವ್ವಳ ಮೌಲ್ಯ ಕ್ರಮವಾಗಿ​ 6.4 ಮತ್ತು 6.2 ಬಿಲಿಯನ್​ ಡಾಲರ್​ ಕುಸಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts