More

    ನೀರಾಯ್ತು, ಇದೀಗ ಗಾಳಿಯ ಮಾಲಿನ್ಯಕಾರಕ ಕಣಗಳಲ್ಲೂ ಕರೊನಾ ವೈರಸ್​? ಸೋಂಕಿಲ್ಲದಿದ್ದರೂ ಹರಡುವುದಕ್ಕೆ ಇದೇ ಕಾರಣವೇ?

    ನವದೆಹಲಿ: ಕರೊನಾ ವ್ಯಾಪಕವಾಗಿ ಹಬ್ಬುತ್ತಿದ್ದು, ಕೆಲವರಲ್ಲಿ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಉದಾಹರಣೆಗೆ ನಂಜನಗೂಡಿನ ಔಷಧ ಕಂಪನಿಯ ಮೊದಲ ರೋಗಿಯಿಂದ ಹಿಡಿದು ಇತ್ತೀಚೆಗೆ ಬೆಂಗಳೂರಿನ ಹೊಂಗಸಂದ್ರ ಕಾರ್ಮಿಕನಿಗೆ ಯಾವ ರೀತಿಯಲ್ಲಿ ಸೋಂಕು ಬಂತು ಎಂಬುದು ತಿಳಿದಿಲ್ಲ. ದೇಶಾದ್ಯಂತ ಇಂಥ ನೂರಾರು ಪ್ರಕರಣಗಳಿವೆ.

    ಇನ್ನು ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ, 28 ಲಕ್ಷ ಜನರಿಗೆ ಸೋಂಕು ತಗುಲಿದೆ. ಅಮೆರಿಕವೊಂದರಲ್ಲಿಯೇ ಸೋಂಕಿತರ ಸಂಖ್ಯೆ 9 ಲಕ್ಷದ ಸಮೀಪಕ್ಕೆ ಬಂದಿದೆ. ಇಲ್ಲಿ ಮೃತರ ಸಂಖ್ಯೆ 51,000 ದಾಟಿದ್ದು, ಸ್ಪೇನ್​, ಇಟಲಿಯಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದ್ದರೆ, ಫ್ರಾನ್ಸ್​ ಹಾಗೂ ಜರ್ಮನಿಯಲ್ಲಿ ಸೋಂಕಿತರ ಪ್ರಮಾಣ 1.60 ಲಕ್ಷವಾಗಿದೆ.

    ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಆವರಿಸಲು ಗಾಳಿಯ ಮೂಲಕ ಸೋಂಕು ಹರಡುತ್ತಿರುವುದೇ ಕಾರಣ ಎಂದು ಅಮೆರಿಕ ಸಂಶೋಧಕರು ವಾದಿಸಿದ್ದರು. ಈ ವಾದಕ್ಕೆ ಅಷ್ಟೇನೂ ಮನ್ನಣೆ ಸಿಗಲಿಲ್ಲ. ಆದರೆ, ಇದೀಗ ಇಟಲಿಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದ ಅಂಶ ನಿಜಕ್ಕೂ ಕಳವಳ ಉಂಟು ಮಾಡಿದೆ.

    ಪ್ಯಾರಿಸ್​ನಲ್ಲಿ ಸಂಸ್ಕರಿತ ನೀರಿನಲ್ಲಿ ಕರೊನಾ ಕಂಡಬಂದು ಆತಂಕ ಮೂಡಿಸಿತ್ತು. ಇದೀಗ ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳಲ್ಲಿ ಕರೊನಾ ವೈರಸ್​ ಕಂಡು ಬಂದಿದೆ. ಜತೆಗೆ, ವೈರಸ್​ಅನ್ನು ಬಹುದೂರದವರೆಗೆ ಕೊಂಡೊಯ್ಯುವ ಶಕ್ತಿ ಅವುಗಳಿಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸಂಶೋಧನೆ ಮುಂದುವರಿದಿದೆ.

    ಇಟಲಿಯ ಬೊಲೊಗ್ನಾ ವಿವಿ ಸಂಶೋಧಕು ಲಿಯೋನಾರ್ಡೋ ಸೆಟ್ಟಿ ಇದನ್ನು ಪತ್ತೆಹಚ್ಚಿದ್ದಾರೆ. ಪ್ರಮಾಣಿತ ಮಾನದಂಡಗಳ ಆಧಾರದಲ್ಲಿಯೇ ಸಂಶೋಧನೆಯನ್ನು ನಡೆಸಿ ಇದನ್ನು ಕಂಡುಕೊಳ್ಳಲಾಗಿದೆ. ಆದರೆ, ಇದಿನ್ನೂ ಆರಂಭಿಕ ಹಂತದಲ್ಲಿದ್ದು, ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳ ಮೇಲೆ ಎಷ್ಟು ಅವಧಿವರೆಗೆ ಇದು ಜೀವಂತವಾಗಿರುತ್ತದೆ. ಅದು ಸೋಂಕನ್ನು ಹಬ್ಬಿಸುವಷ್ಟು ಶಕ್ತಿಶಾಲಿಯಾಗಿದೆಯೇ? ಎಂಬುದನ್ನು ಕಂಡುಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಲಿಯಾನಾರ್ಡೋ ಹೇಳುತ್ತಾರೆ.

    ಇಟಲಿಯ ಬರ್ಗಾಮೊ ಪ್ರಾಂತ್ಯದ ಕೈಗಾರಿಕಾ ವಸಾಹತುಗಳ ಗಾಳಿಯ ಕಣಗಳ ಮಾದರಿ ಪಡೆಯಲಾಗಿತ್ತು. ಇದರಲ್ಲಿ ಕೋವಿಡ್​-19 ಹೋಲುವ ವೈರಸ್​ ಕಂಡುಬಂದಿದೆ. ಮಾಲಿನ್ಯ ಪ್ರಮಾಣ ಹೆಚ್ಚಾದಂತೆ ಆ ಪರಿಸರದಲ್ಲಿ ಸೋಂಕು ಹೆಚ್ಚಾಗಿರುವುದು ಗೊತ್ತಾಗಿದೆ.
    ಇದಲ್ಲದೇ. ಇನ್ನೂ ಎರಡು ಸಂಶೋಧಕರ ತಂಡಗಳು ಕೂಡ ಗಾಳಿಯಲ್ಲಿನ ಮಾಲಿಕಾರಕ ಕಣಗಳು ಕರೊನಾವನ್ನು ದೂರಕ್ಕೆ ಸಾಗಿಸಬಲ್ಲವು ಎಂಬುದನ್ನು ಕಂಡುಹಿಡಿದಿವೆ. ಇದು ಕರೊನಾ ಸೋಂಕು ವ್ಯಾಪಿಸುವುದರ ಬಗ್ಗೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.

    ಲಾಕ್​ಡೌನ್​ನಿಂದಾಗಿ ದಕ್ಷಿಣ ಭಾರತದಲ್ಲೇಕೆ ಶುಭ್ರವಾಗಿಲ್ಲ ವಾಯಮಂಡಲ? ನಾಸಾ ಅಧ್ಯಯನ ಹೇಳೋದೇನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts