More

    ಇಟಲಿಯಲ್ಲಿ ಕರೊನಾ ಗೆದ್ದ ಎರಡು ತಿಂಗಳ ಹಸುಗೂಸು!

    ರೋಮ್: ವಿಶ್ವದಲ್ಲಿಯೇ ಅತಿ ಹೆಚ್ಚು ಕರೊನಾ ಸೋಂಕಿತರ ದೇಶಗಳಲ್ಲಿ ಒಂದೆನಿಸಿಕೊಂಡಿರುವ ಇಟಲಿಯಲ್ಲಿ, ಎರಡು ತಿಂಗಳ ಹಸುಗೂಸೊಂದು ವೈರಸ್‌ ವಿರುದ್ಧ ಜಯಸಾಧಿಸಿ ಅಚ್ಚರಿ ಮೂಡಿಸಿದೆ.

    ಇಟಲಿಯ ಅತ್ಯಂತ ಕಿರಿಯ ಕರೊನಾ ವೈರಸ್‌ ಪೀಡಿತ ಪ್ರಜೆ ಎನಿಸಿಕೊಂಡಿದ್ದ ಈ ಮಗು ಈಗ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಇಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.

    ಜ್ವರದಿಂದ ಬಳಲುತ್ತಿದ್ದ ಮಗುವಿನ ತಾಯಿ ಕಳೆದ ಮಾರ್ಚ್ 18ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ನಂತರ ಮನೆ ಮಂದಿಯನ್ನೆಲ್ಲಾ ಪರೀಕ್ಷಿಸಿದಾಗ ಮಗುವಿನಲ್ಲೂ ಸೋಂಕು ಕಾಣಿಸಿಕೊಂಡಿತ್ತು. ತಾಯಿ ಮತ್ತು ಮಗು ಇಬ್ಬರೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿತ್ತು.

    ಚಿಕಿತ್ಸೆಯ ಬಳಿಕ ತಾಯಿಯನ್ನು ಪರೀಕ್ಷಿಸಿದಾಗ ನೆಗೆಟಿವ್‌ ಬಂದಿದ್ದು, ಮಗು ಕೂಡ ಸೋಂಕಿನಿಂದ ಗುಣಮುಖವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನೂ ಮನೆಗೆ ಕಳುಹಿಸಲಾಗಿದೆ. ಇಬ್ಬರೂ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

    ಕರೊನಾಗೆ ಇಟಲಿಯಲ್ಲಿ ಇಲ್ಲಿಯವರೆಗೆ 17,669 ಮಂದಿ ಬಲಿಯಾಗಿದ್ದಾರೆ. 1.40 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ. ಈಗ ನಿಧಾನವಾಗಿ ಸೋಂಕಿತರ ಪ್ರಮಾಣ ತಗ್ಗುತ್ತಿದೆ ಎನ್ನಲಾಗಿದೆ. (ಏಜನ್ಸೀಸ್‌)

    ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

    ಲಾಕ್​ಡೌನ್​ ಕಾಲ ಕಳೆಯಲು ರಸಪ್ರಶ್ನೆ ಹಾಗೂ ಹಾಸ್ಯದ ಮೊರೆ ಹೋದ ಪ್ಯಾರಿಸ್​ ನಗರದ ಅಪಾರ್ಟ್​ಮೆಂಟ್​ ನಿವಾಸಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts