More

    ಹಳ್ಳಿಗಳಿಗೆ ಸೋಂಕು ಪ್ರವೇಶ ನಿರ್ಬಂಧವೇ ಮೊದಲ ಆದ್ಯತೆ: ಡಿಸಿಎಂ ಅಶ್ವತ್ಥ ನಾರಾಯಣ

    ಬೆಂಗಳೂರು: ಕರೊನಾ 2ನೇ ಅಲೆಯು ತಂದೊಡ್ಡಿರುವ ಸೋಂಕಿನ ಸಂಕಷ್ಟ ಹಳ್ಳಿಗಳಿಗೆ ಹಬ್ಬದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೀಡಲಿರುವ ಸಲಹೆ ಆಧರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

    ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಜತೆಗೆ ನಡೆಸಿದ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರರಿಗೆ ಪ್ರತಿಕ್ರಿಯಿಸಿದರು.

    ಗ್ರಾಮೀಣ ಭಾಗದಲ್ಲಿ ಸೋಂಕು ಉಲ್ಬಣಿಸಿದರೆ, ನಿಯಂತ್ರಣ ದೊಡ್ಡ ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ಶಕ್ತಿಮೀರಿ ಶ್ರಮಿಸಿ ಕರೊನಾ ಕಟ್ಟಿಹಾಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಈಗಾಗಲೇ ಸೂಚಿಸಿದ್ದಾರೆ ಎಂದರು.

    ಇದನ್ನೂ ಓದಿರಿ: ಲಾಕ್‌ಡೌನ್‌ ಇಫೆಕ್ಟ್‌: ಸೋಂಕಿತರ ಸಂಖ್ಯೆಯಲ್ಲಾದ ವ್ಯತ್ಯಾಸವೇನು? ಪ್ರಧಾನಿಗೆ ನೀಡಿದರು ಈ ಮಾಹಿತಿ

    ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಪ್ರಧಾನಿ ಮತ್ತಷ್ಟು ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ಹಳ್ಳಿಗೆ ಅಧಿಕಾರಿಗಳ ತಂಡ ನೇಮಕ, ಪರೀಕ್ಷೆ ಪ್ರಮಾಣ ಹೆಚ್ವಳ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸಿಎಂ ಬಿಎಸ್ ವೈ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

    ಲಾಕ್ ಡೌನ್ ವಿಸ್ತರಣೆ ವಿಚಾರದಲ್ಲೂ ವಿಭಿನ್ನ ಅಭಿಪ್ರಾಯ, ಸಲಹೆಗಳಿವೆ. ಇದೆಲ್ಲವನ್ನೂ ಸಿಎಂ ಬಿಎಸ್ ವೈ ಪರಿಶೀಲಿಸಿ, ಚರ್ಚಿಸಿದ ಬಳಿಕ ನಿರ್ಧರಿಸಲಿದ್ದಾರೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

    ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರಸರ್ಕಾರ

    ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

    ಕೋವಿಡ್​ನಿಂದ ಗುಣವಾದ್ರೂ ಅವಳಿ ಸಹೋದರಿಬ್ಬರ ಸಾವು: ಕರೊನಾದ ಇನ್ನೊಂದು ಕರಾಳ ಮುಖ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts