More

    ಮೈಸೂರು ವಿವಿಯಲ್ಲಿ ಓದುತ್ತಿರೋ 18 ಚೀನಾ ವಿದ್ಯಾರ್ಥಿಗಳಿಗೆ ವಾಪಸ್ ಬಾರದಂತೆ ಸೂಚನೆ

    ಮೈಸೂರು: ಚೀನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್​ ಬಗ್ಗೆ ದೇಶದೆಲ್ಲೆಡೆ ಭೀತಿಯ ನಡುವೆಯೇ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಿದ್ದು, ಇದರ ಬೆನ್ನಲ್ಲೇ ಮೈಸೂರಿಗೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಚೀನಾ ವಿದ್ಯಾರ್ಥಿಗಳಿಗೆ ಮರಳಿ ಬರದಂತೆ ಸೂಚನೆ ನೀಡಲಾಗಿದೆ.

    ಕೊರೊನಾ ವೈರಸ್ ಈಗಾಗಲೇ ಚೀನಾದಲ್ಲಿ 170ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ 18 ಚೀನಾ ವಿದ್ಯಾರ್ಥಿಗಳಿಗೆ ವಾಪಸ್ ಬಾರದಂತೆ ಹೇಳಲಾಗಿದೆ. ಸದ್ಯ ರಜೆ ಮೇಲೆ ವಿದ್ಯಾರ್ಥಿಗಳು ಚೀನಾಕ್ಕೆ ತೆರಳಿದ್ದಾರೆ.

    ಮೈಸೂರು ವಿವಿಯಲ್ಲಿ ಚೀನಾ ದೇಶದ ಒಟ್ಟು 120 ವಿದ್ಯಾರ್ಥಿಗಳು ಇದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ ಟೆಕ್, ಎಂ.ಎಸ್. ಪ್ರೋಗ್ರಾಮಿಂಗ್​ನ ಇನ್ಫಾರ್ಮೇಷನ್ ಟೆಕ್ನಾಲಜಿ, ಸಾಫ್ಟ್​ವೇರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 120 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಚೀನಾಗೆ ತೆರಳಿದ್ದು, ಅವರನ್ನು ಸದ್ಯಕ್ಕೆ ಅಲ್ಲಿಂದ ಹಿಂದಿರುಗದಂತೆ ಸೂಚಿಸಲಾಗಿದೆ.

    ವಿದ್ಯಾರ್ಥಿಗಳು ಹೊಸ ವರ್ಷಾಚರಣೆಗೆ ತೆರಳಿದ್ದರು. ಚೀನಾದಲ್ಲಿ ಹೊಸ ವರ್ಷದ ಆಚರಣೆ ಬಹುದೊಡ್ಡ ಆಚರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯಿಂದ ರಜೆ ಮೇಲೆ ಜ.15 ರಂದು ಚೀನಾಗೆ ತೆರಳಿರುವ ವಿದ್ಯಾರ್ಥಿಗಳು ಜ.25 ರಂದು ವಾಪಸ್ ಆಗಬೇಕಿತ್ತು. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಕಾರಣದಿಂದ ಅವರನ್ನು ಸದ್ಯಕ್ಕೆ ಹಿಂದಿರುಗಬೇಡಿ ಎಂದು ವಿಶ್ವವಿದ್ಯಾಲಯ ಹೇಳಿದೆ.

    ವಿದ್ಯಾರ್ಥಿಗಳು ಚೀನಾದ ಝೂಮೇಡಿಯನ್ ( zhumadian) ಪ್ರಾಂತ್ಯದ ಹೊಂಗೈ ( Huanghai) ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ವಿದ್ಯಾರ್ಥಿ ವಿನಿಮಯ ಯೋಜನೆಯಲ್ಲಿ ಬಂದಿದ್ದ ಮೈಸೂರು ವಿವಿಗೆ ಬಂದಿದ್ದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts