More

    ಕರೊನಾ ಭೀತಿ: ಸ್ಯಾನಿಟೈಸರ್ ಹಾಕಿಕೊಂಡು ನವ ವಧು-ವರರಿಗೆ ಸಿಎಂ ಬಿಎಸ್​​ವೈ ಶುಭಹಾರೈಕೆ

    ಬೆಳಗಾವಿ: ಕರೊನಾ ವೈರಸ್​ ಸೋಂಕು ಹರಡುವ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಹೊರಡಿಸಿರುವ ನಿರ್ಬಂಧದಂತೆ ಅದ್ಧೂರಿ ವಿವಾಹಕ್ಕೆ ಬ್ರೆಕ್ ಹಾಕಿ ಆಯೋಜಿಸಲಾಗಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ಸರಳ ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಮಿಸಿ ಸ್ಯಾನಿಟೈಸರ್ ಹಾಕಿಕೊಂಡು ವಧು-ವರರಿಗೆ ಹಾರೈಸಿದರು.‌

    ಕರೊನಾ ಹರಡುವುದನ್ನು ತಡೆಗಟ್ಟಲು ಮದುವೆ ಸಮಾರಂಭಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಖಾನಾಪುರ ರಸ್ತೆಯಲ್ಲಿರುವ ಶಗುನ್ ಗಾರ್ಡನ್‌ನಲ್ಲಿ ಸರಳವಾಗಿ ಮದುವೆ ಕಾರ್ಯ ನಡೆಯುತ್ತಿದೆ.

    ಈಗಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜವಳಿ ಸಚಿವ ಶ್ರೀಮಂತ ಪಾಟೀಲ, ಶಾಸಕರಾದ ಗಣೇಶ ಹುಕ್ಕೇರಿ, ಮಹೇಶ ಕುಮಠಳ್ಳಿ, ಆನಂದ ಮಾಮನಿ ಹಾಗೂ ಶ್ರೀಶೈಲ ಜಗದ್ಗುರು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ.

    ಇನ್ನು ಹಲವು ಸಚಿವರು ಮದುವೆಗೆ ಆಗಮಿಸಲಿದ್ದು, ಕಾರ್ಯಕ್ರಮದ ಎರಡು ಕಡೆಗಳಲ್ಲಿ ಕರೊನಾ ಮುಂಜಾಗ್ರತಾ ಕ್ರಮಗಳ ಬ್ಯಾನರ್ ಹಾಕಲಾಗಿದೆ. ಸ್ಯಾನಿಟೈಸರ್ ಹಾಕಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಲಾಗಿದೆ.

    ಕರೊನಾ ನಿಯಂತ್ರಣಕ್ಕಾಗಿ ಶ್ರೀಶೈಲದ ಯಾತ್ರೆ ಸ್ಥಗಿತಗೊಳಿಸಿ: ಭಕ್ತರಲ್ಲಿ ಶ್ರೀ ಶ್ರೀಶೈಲ ಜಗದ್ಗುರುಗಳ ಮನವಿ

    ಇನ್ನು ಮುಂದೆ ರೈಲಿನಲ್ಲಿ ಬೆಡ್​ಶೀಟ್​ ಕೊಡಲ್ಲ, ಕರ್ಟನ್​ ಇರಲ್ಲ! ಬೇಕಾದರೆ ನೀವೇ ತಂದುಕೊಳ್ಳಿ ಎಂದ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts