More

    ಕರೊನಾ ವೈರಸ್​ಗೆ ಆಯುರ್ವೇದದಲ್ಲಿದ್ಯಾ ಪರಿಹಾರ..?

    ಜನಜೀವನದಲ್ಲಿ ಒಮ್ಮಿಂದೊಮ್ಮಲೇ ಏರುಪೇರು ಮಾಡುವ, ಬದುಕನ್ನೇ ಹೈರಾಣಾಗಿಸುವ ತೀವ್ರತರನಾದ ವೈರಾಣು ರೋಗಗಳು ಕಾಲಕಾಲಕ್ಕೆ ಮನುಷ್ಯರನ್ನು ಕಾಡುವುದಿದೆ. ಅಂತೆಯೇ ಕರೊನಾ ವೈರಾಣುವಿನಿಂದ ಬರುವ ಕೋವಿಡ್19 ಇದೀಗ ಬಂದಿದೆ. ಇದನ್ನು ಗುಣಪಡಿಸುವ ರಾಸಾಯನಿಕ ಔಷಧಗಳಿಲ್ಲ. ಔಷಧ ಅಥವಾ ಲಸಿಕೆ ಅಭಿವೃದ್ಧಿಪಡಿಸಲು ಕನಿಷ್ಠಪಕ್ಷ ಆರು ವರ್ಷವಾದರೂ ಬೇಕು. ಅಷ್ಟರೊಳಗೆ ಕರೊನಾ ವೈರಸ್​ಗೆ ಆಯುರ್ವೇದದಲ್ಲಿದ್ಯಾ ಪರಿಹಾರ..?ಈ ವೈರಾಣುಗಳು ರೂಪಾಂತರಗೊಂಡು ಹೊಸ ಜನ್ಮ ಪಡೆದಿರುತ್ತವೆ! ಇದರಿಂದಾಗಿ ರಾಸಾಯನಿಕ ಔಷಧಗಳ ಸಂಶೋಧನೆಗೆ ದೊಡ್ಡ ತೊಡಕಾಗಿರುವುದು ದೌರ್ಭಾಗ್ಯ. ಇನ್ನು ಆಯುರ್ವೆದದಲ್ಲಿ ಚಿಕಿತ್ಸೆಯಿದೆ ಎನ್ನುವವರಿಗೆ ಎರಡು ಪ್ರಶ್ನೆಗಳು ಎದುರಾಗುತ್ತವೆ. ಹೊಸರೋಗಕ್ಕೆ ಪ್ರಾಚೀನ ಆಯುರ್ವೆದದಲ್ಲಿ ಚಿಕಿತ್ಸೆಯಿರಲು ಹೇಗೆ ಸಾಧ್ಯ? ಅವು ಕೋವಿಡ್19ರಲ್ಲಿ ಪರಿಣಾಮಕಾರಿ ಎಂಬುದನ್ನು ಪರೀಕ್ಷಿಸಲಾಗಿದೆಯೇ? ಔಷಧ ಕೊಟ್ಟು ಪರೀಕ್ಷೆಗೆ ಒಳಪಡಿಸಿರಲು ಸಾಧ್ಯವೇ ಇಲ್ಲ. ಏಕೆಂದರೆ ಇದು ಹೊಸ ರೋಗ. ಆದರೆ ಚಿಕಿತ್ಸಾ ಪದ್ಧತಿ ಹಳೆಯದಾದಾಕ್ಷಣ ಹೊಸ ರೋಗಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎಂಬುದು ಬಾಲಿಶ ಚಿಂತನೆ. ಹೊಸ ರೋಗ ಲಕ್ಷಣಗಳೊಂದಿಗೆ ವ್ಯಕ್ತಿಯು ಚಿಕಿತ್ಸೆಗೆ ಆಗಮಿಸಿದರೆ ವೈದ್ಯನಾದವನು ಕೈಕಟ್ಟಿ ಕೂರುವುದಲ್ಲ. ಗುಣಲಕ್ಷಣಗಳ ಆಧಾರದಲ್ಲಿ ಚಿಕಿತ್ಸಾಸೂತ್ರವನ್ನು ನಿರ್ಣಯಿಸಿ ಔಷಧೋಪಚಾರಗಳನ್ನು ಯೋಜಿಸಬೇಕು ಎಂಬ ವಿಚಾರವನ್ನು ಆಯುರ್ವೆದದ ಮೂಲಗ್ರಂಥಗಳೆಲ್ಲ ಸ್ಪಷ್ಟ ಅಕ್ಷರಗಳಲ್ಲಿ ದಾಖಲಿಸಿವೆ. ವೈದ್ಯವಿಜ್ಞಾನ ನಿಂತ ನೀರಾಗಬಾರದೆಂಬ ಕಾಳಜಿ ಪ್ರಾಚೀನ ಭಾರತದ ವೈದ್ಯವಿಜ್ಞಾನಿಋಷಿಗಳಿಗೆ ಇತ್ತೆಂಬುದು ನಿಜಕ್ಕೂ ಶ್ಲಾಘನಾರ್ಹ.

    ವೈರಾಣು ರೋಗಗಳ ಚಿಕಿತ್ಸಾ ವಿಚಾರದಲ್ಲಿ ಆಯುರ್ವೆದಕ್ಕೆ ಪರಮಾಧಿಕಾರವಿದೆ. ವೈರಾಣುವಿರೋಧಿ ರಾಸಾಯನಿಕ ಔಷಧಗಳು ಬೆರಳೆಣಿಕೆಯಷ್ಟೂ ಇಲ್ಲದಿರುವುದು ಒಂದೆಡೆಯಾದರೆ ಆಯುರ್ವೆದದಲ್ಲಿ ನೂರಾರು ವನಸ್ಪತಿಗಳು ವೈರಾಣು ವಿರೋಧಿ ಔಷಧಗಳಾಗಿ ಲಭ್ಯವಿರುವುದು ಮಾನವನ ಸೌಭಾಗ್ಯ ಎನ್ನಲೇಬೇಕು. ಚಿಕಿತ್ಸೆಯ ಅನುಭವದಿಂದ ಹೇಳುವುದಾದರೆ ಈ ಸಸ್ಯೌಷಧಿಗಳು ಕೇವಲ ವೈರಾಣು ವಿರೋಧಿಗಳಲ್ಲ, ಅವು ಖಚಿತವಾಗಿ ವೈರಾಣುನಾಶಕಗಳು! ನೇರವಾಗಿ ವೈರಾಣುಗಳಿಗೇ ಅಂತ್ಯ ಕಾಣಿಸಬಲ್ಲ ಔಷಧಗಳೆಂದರೆ ಇನ್ನೂ ಮೇಲ್ಮಟ್ಟದ ಔಷಧಗಳೆಂದರ್ಥ. ಇಂಥ ಮಾನವೋಪಯೋಗಿ ವೈರಾಣುನಾಶಕ ರಾಸಾಯನಿಕ ಔಷಧಗಳಂತೂ ದುರ್ಲಭವಾಗಿದೆ. ನೆಲನೆಲ್ಲಿ, ಅಮೃತಬಳ್ಳಿ, ಪರ್ಪಟಕ, ಸೊಗದೆಬೇರು, ಶ್ರೀಗಂಧ, ರಕ್ತಚಂದನ, ಲಾವಂಚ, ಶುಂಠಿ, ತುಳಸಿ, ಭದ್ರಮುಷ್ಟಿ, ಕಿರಾತಕಡ್ಡಿ, ಕಹಿಬೇವು, ಮುರುಗಲ ಹಣ್ಣು, ಬೆಳ್ಳುಳ್ಳಿ, ನೆಲಬೇವು, ಅರಿಶಿಣ, ನೆಲ್ಲಿಕಾಯಿ, ಪಾರಿಜಾತ, ನೆಲಗುಳ್ಳ, ಗೋಕ್ಷುರ, ಹಿಪ್ಪಲಿ, ಕಾಳುಮೆಣಸು, ಬಾಲಿರಕ್ಷಿ, ಬಿಲ್ವ ಮುಂತಾದವುಗಳು ಅಗ್ರಗಣ್ಯ ವೈರಾಣುನಾಶಕಗಳಾಗಿರುವುದು ನಮಗೆ ವರದಾನ. ಜೊತೆಯಾಗಿ ಇವುಗಳಲ್ಲಿ ಹೆಚ್ಚಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಸಾಯನ ದ್ರವ್ಯಗಳೂ ಹೌದು! ರೋಗಗಳಿಗೆ ಮೂಲಕಾರಣವಾಗಿರುವ ‘ಮಂದಾಗ್ನಿ’ಯೆಂಬ ಕುಂದಿದ ಪಚನಶಕ್ತಿಯನ್ನು ಸರಿಗೊಳಿಸಿ ಯಕೃತ್​ಗೆ ಬಲದಾಯಕವಾಗಿಯೂ ಇವುಗಳೆಲ್ಲ ಕಾರ್ಯನಿರ್ವಹಿಸುವುದು ಲಾಭದ ಮೇಲಿನ ಲಾಭ! ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ಹಂದಿಜ್ವರ, ಹೆಪಟೈಟಿಸ್ ಬಿ, ಡೆಂಘೀಜ್ವರ, ಚಿಕೂನ್​ಗುನ್ಯಾಗಳಂಥ ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸುವ ಸಾಮರ್ಥ್ಯ ಪ್ರದರ್ಶಿಸಿರುವುದರಿಂದ ಈ ದ್ರವ್ಯಗಳು ಬಹುವೈರಾಣು ರೋಗನಾಶಕಗಳಾಗಿದ್ದು ಚಿಕಿತ್ಸೆಗೆ ಅರ್ನ್ಯಘ ರತ್ನಗಳಾಗಿವೆ. ಆದುದರಿಂದ ಕೋವಿಡ್19ರ ಚಿಕಿತ್ಸೆಗೂ ಒದಗಿಬರುತ್ತದೆಂಬ ಅಪರಿಮಿತ ವಿಶ್ವಾಸವಿದೆ.

    ಪಂಚಸೂತ್ರಗಳು

    • ಜ್ಯೇಷ್ಠಮಧು:ನೇತ್ರಗಳಿಗೆ ಹಿತಕರ.
    • ಸಿಹಿಗೆಣಸು: ಮೂತ್ರಕಲ್ಲು ಗುಣಕಾರಿ.
    • ಅಕ್ರೋಟ್(ವಾಲ್​ನಟ್): ಜ್ವರ ನಿಯಂತ್ರಕ.
    • ದಾಸವಾಳ ಹೂ: ಮಿದುಳಿಗೆ ಬಲದಾಯಕ.
    • ಹತ್ತಿಮರದ ಹೂ: ಮೂತ್ರಪ್ರಮಾಣ ಹೆಚ್ಚಿಸುವುದು.

    ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿಂದಿಗಿಂತಲೂ ಬಹಳ ವಿಭಿನ್ನವಾಗಿರಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts