More

    ಕರೊನಾ ವೈರಸ್ ವಿರುದ್ಧ್ದ ಹೋರಾಡುವವರ ಕಾರ್ಯಕ್ಕೆ ಸಹಕರಿಸಲು ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಲಹೆ

    ಸಿರಗುಪ್ಪ: ತಾಲೂಕಿನ ಗಡಿ ಭಾಗದ ಸೀಮಾಂಧ್ರ ಪ್ರದೇಶದಲ್ಲಿ ಕರೊನಾ ಸೋಂಕಿಗೆ ಒಳಗಾದ ವ್ಯಕ್ತಿಗಳು ತಾಲೂಕಿನ ಒಳಗೆ ನುಸುಳದಂತೆ ಅಧಿಕಾರಿಗಳು ಕೈಗೊಂಡಿರುವ ಚೆಕ್‌ಪೋಸ್ಟ್‌ಗಳ ಕಾರ್ಯವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಗುರುವಾರ ಪರಿಶೀಲಿಸಿದರು.

    ತಾಲೂಕಿನ ಇಟಗಿಹಾಳ್ ಚೆಕ್ ಪೋಸ್ಟ್ ವೀಕ್ಷಿಸಿ ಮಾತನಾಡಿದ ಅವರು, ತಾಲೂಕಿನ ಎಚ್.ಹೊಸಳ್ಳಿ ಗ್ರಾಮದಲ್ಲಿ ಕರೊನಾ ಪ್ರಕರಣ ಪತ್ತೆಯಾಗಿರುವುದು ನಂಜನಗೂಡಿನ ವ್ಯಕ್ತಿಗಳಿಂದ. ಅದು ಬಿಟ್ಟರೆ ದೇವರ ದಯೆಯಿಂದ ತಾಲೂಕಿನಲ್ಲಿ ಸೋಂಕಿತರು ಕಾಣಿಸಿಕೊಂಡಿಲ್ಲ. ಗಡಿ ಭಾಗದ ಜನರು ನೆರೆಯ ಸೀಮಾಂಧ್ರದಿಂದ ಯಾರೂ ಬಾರದಂತೆ ನೋಡುಕೊಳ್ಳುವುದು ಮತ್ತು ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಗ್ರಾಮದವರಲ್ಲದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು. ಪ್ರತಿ ಗ್ರಾಮದ ಜನರೂ ಮನೆಯಲ್ಲೇ ಇರಬೇಕು. ಅನವಶ್ಯವಾಗಿ ಸಂಚರಿಸುವುದನ್ನು ನಿಲ್ಲಿಸಬೇಕು. ಜತೆಗೆ ಕರೊನಾ ವೈರಸ್ ವಿರುದ್ಧ್ದ ನಿರಂತರವಾಗಿ ಹೋರಾಡುತ್ತಿರುವ ಆರೋಗ್ಯ, ಪೊಲೀಸ್, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸಹಕರಿಸಿ ಅವರಿಗೆ ಗೌರವ ನೀಡಬೇಕೆಂದು ಶಾಸಕ ಸಲಹೆ ನೀಡಿದರು. ತಾಲೂಕಿನ ಗಡಿ ಭಾಗದ ವತ್ತುಮುರಣಿ, ಇಟಗಿಹಾಳ್, ಕೆ.ಬೆಳಗಲ್, ಮಾಟಸೂಗೂರು ಗ್ರಾಮಗಳ ಹತ್ತಿರದ ಚೆಕ್ ಪೋಸ್ಟ್‌ಗಳನ್ನು ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts