ಲಖನೌ: ಟ್ರಾವೆಲ್ ಹಿಸ್ಟರಿ ಇಲ್ಲದ 33 ವರ್ಷದ ಮತ್ತೊರ್ವ ವ್ಯಕ್ತಿಯಲ್ಲಿ ಕರೊನಾ ವೈರಸ್ ಸೋಂಕು ಧೃಡವಾಗಿದ್ದು, ನಾವು ಕೋವಿಡ್-19 ಮೂರನೇ ಹಂತಕ್ಕೆ ತಲುಪಿದ್ವಾ? ಎಂಬ ಆತಂಕ ಮನೆಮಾಡಿದೆ.
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ವ್ಯಕ್ತಿಗೆ ಬುಧವಾರ ಕರೊನಾ ವೈರಸ್ ಪಾಸಿಟಿವ್ ವರದಿಯಾಗಿದೆ. ಆದರೆ, ಟ್ರಾವೆಲ್ ಹಿಸ್ಟರಿ ಇಲ್ಲದಿರುವುದರಿಂದ ಸಮುದಾಯ ಹರಡುವಿಕೆಯ ಪ್ರಕರಣ ಎಂದು ಪರಿಗಣಿಸಲಾಗಿದೆ.
ನಿನ್ನೆಯಷ್ಟೇ ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ನೊಯ್ಡಾದ 137ನೇ ಸೆಕ್ಟರ್ನಲ್ಲಿ ವಾಸವಾಗಿಗಿರುವ ದಂಪತಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿತ್ತು. ಕಳವಳಕಾರಿಯೆಂದರೆ ನೊಯ್ಡಾ ದಂಪತಿಗೂ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಆದರೆ ಲಂಡನ್ನಿಂದ ಬಂದಿದ್ದ ಆಪ್ತರೊಬ್ಬರಿಗೆ ಆತಿಥ್ಯ ನೀಡಿದ್ದರು ಎಂದು ತಿಳಿದುಬಂದಿದೆ.
ಆತಿಥ್ಯ ಸ್ವೀಕರಿಸಿದವರಿಗೇನಾದರೂ ರೋಗದ ಲಕ್ಷಣಗಳಿದ್ದರೆ, ದಂಪತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಲಂಡನ್ ಅತಿಥಿಯ ಜಾಲವನ್ನು ಪತ್ತೆ ಮಾಡಿದರೆ ಎಲ್ಲ ಸಂಶಯಗಳಿಗೆ ಉತ್ತರ ಸಿಗಲಿದೆ ಎಂದು ಯುಪಿಯ ಆರೋಗ್ಯ ಇಲಾಖೆ ತಿಳಿಸಿದೆ.
ಟ್ರಾವೆಲ್ ಹಿಸ್ಟರಿಯಿಲ್ಲದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ಹಾಗೂ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕರೊನಾ ವೈರಸ್ ಎರಡನೇ ಹಂತದಿಂದ ಮೂರನೇ ಹಂತಕ್ಕೇನಾದರೂ ನಾವು ಕಾಲಿಟ್ಟೆವಾ ಎಂಬ ಸಂಶಯ ಆರಂಭವಾಗತೊಡಗಿದೆ.
ಈವರೆಗೂ ಉತ್ತರ ಪ್ರದೇಶದಲ್ಲಿ 34 ಸೋಂಕು ಪ್ರಕರಣಗಳು ವರದಿಯಾಗಿವೆ. ಕರೊನಾಗೆ ದಾಳಿಗೆ ಸಿಲುಕಿರುವ ಪ್ರಮುಖ ನಗರಗಳಲ್ಲಿ ಇದು ಕೂಡ ಒಂದಾಗಿದೆ. (ಏಜೆನ್ಸೀಸ್)
VIDEO| ಕೋವಿಡ್-19 ಮುನ್ನೆಚ್ಚರಿಕ್ಕೆ ವಹಿಸಿ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ: ಶ್ರೀ ಶ್ರೀಶೈಲ ಜಗದ್ಗುರುಗಳು